Asianet Suvarna News Asianet Suvarna News

5 ವಿಕೆಟ್ ಕಬಳಿಸಿ ಇಶಾಂತ್ ಶರ್ಮಾ ನಿರ್ಮಿಸಿದ್ರು ದಾಖಲೆ!

ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಇಶಾಂತ್ ಶರ್ಮಾ ದಾಖಲೆ ಬರೆದಿದ್ದಾರೆ. 5 ವಿಕೆಟ್ ಕಬಳಿಸೋ ಮೂಲಕ ಟೀಂ ಇಂಡಿಯಾ ವೇಗಿ ನಿರ್ಮಿಸಿದ ದಾಖಲೆ ಏನು? ಇಲ್ಲಿದೆ ವಿವರ.

Ishant Sharma 3rd Indian bowler to claim a five-wicket haul at Edgbaston
Author
Bengaluru, First Published Aug 4, 2018, 2:54 PM IST

ಎಡ್ಜ್‌ಬಾಸ್ಟನ್‌(ಆ.03): ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ವೇಗಿ ಇಶಾಂತ್  ಶರ್ಮಾ ದಾಳಿಗೆ ಆಂಗ್ಲರು ತತ್ತರಿಸಿದ್ದರು. 2ನೇ ಇನ್ನಿಂಗ್ಸ್‌ನಲ್ಲಿ ಇಶಾಂತ್ 5 ವಿಕೆಟ್ ಕಬಳಿಸೋ ಮೂಲಕ ಇಂಗ್ಲೆಂಡ್ ತಂಡವನ್ನ 180 ರನ್‌ಗೆ ಕಟ್ಟಿಹಾಕಿದ್ದರು.

ಎಡ್ಜ್‌ಬಾಸ್ಟನ್ ಮೈದಾನದಲ್ಲಿ 5 ವಿಕೆಟ್ ಕಬಳಿಸೋ ಮೂಲಕ ಇಶಾಂತ್ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಎಡ್ಜ್‌ಬಾಸ್ಟನ್ ಮೈದಾನದಲ್ಲಿ 5 ವಿಕೆಟ್ ಕಬಳಿಸಿದ 3ನೇ ಭಾರತೀಯ ಅನ್ನೋ ಹೆಗ್ಗಳಿಕೆಗೆ ಇಶಾಂತ್ ಪಾತ್ರರಾಗಿದ್ದಾರೆ.

 

 

1979 ರಲ್ಲಿ ಕಪಿಲ್ ದೇವ್ 146 ರನ್ ನೀಡಿ 5 ವಿಕೆಟ್ ಕಬಳಿಸಿದ್ದರು. ಬಳಿಕ 1986ರಲ್ಲಿ ಚೇತನ್ ಶರ್ಮಾ 58 ರನ್ ನೀಡಿ 5 ವಿಕೆಟ್ ಉರುಳಿಸಿದ್ದರು. ಇದೀಗ ಇಶಾಂತ್ 51 ರನ್ ನೀಡಿ 5 ವಿಕೆಟ್ ಕಬಳಿಸಿದ್ದಾರೆ.  ಈ ಮೂಲಕ ಎಡ್ಜ್‌ಬಾಸ್ಟನ್ ಮೈದಾನದಲ್ಲಿ ಭಾರತದ ಯಶಸ್ವಿ ಬೌಲರ್ ಆಗಿ ಇಶಾಂತ್ ಹೊರಹೊಮ್ಮಿದ್ದಾರೆ.

Follow Us:
Download App:
  • android
  • ios