ನವದೆಹಲಿ[ಆ.31]: ಗಾಯದಿಂದ ಮರಳಿದರೂ ಲಯ ಕಂಡುಕೊಳ್ಳದ ಆರಂಭಿಕ ಶಿಖರ್ ಧವನ್ ಭಾರತ ‘ಎ’ ತಂಡದಲ್ಲಿ ಆಡಲಿದ್ದಾರೆ. ವಿಜಯ್ ಶಂಕರ್ ಗಾಯಗೊಂಡು ಹೊರಬಿದ್ದಿದ್ದರಿಂದ ಶಂಕರ್ ಬದಲು ಧವನ್ ದ.ಆಫ್ರಿಕಾ ‘ಎ’ ವಿರುದ್ಧದ ಕೊನೆಯ 2 ಅನಧಿಕೃತ ಏಕದಿನ ಪಂದ್ಯಗಳಲ್ಲಿ ಆಡಲಿದ್ದಾರೆ.

ಕೊಹ್ಲಿ ಜೊತೆಗೆ ಮುನಿಸು; ಟೀಕೆಗೆ ಆರ್ ಅಶ್ವಿನ್ ತಿರುಗೇಟು!

ಧವನ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಧವನ್ ಇತ್ತೀಚೆಗಷ್ಟೇ ಮುಕ್ತಾಯವಾದ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಹಾಗೂ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಮಾಡಿದ್ದರು. ಮೂರು ಟಿ20 ಪಂದ್ಯಗಳಿಂದ ಧವನ್ ಕೇವಲ 27 ರನ್ ಬಾರಿಸಿದರೆ, ಎರಡು ಏಕದಿನ ಪಂದ್ಯಗಳಿಂದ ಧವನ್ ಕಲೆಹಾಕಿದ್ದು ಕೇವಲ 38 ರನ್’ಗಳು ಮಾತ್ರ. ಇದೀಗ ಧವನ್ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾದಲ್ಲಿ ಧವನ್ ಸ್ಥಾನ ಪಡೆದಿದ್ದು, ಟೂರ್ನಿ ಆರಂಭಕ್ಕೂ ಮುನ್ನ ಫಾರ್ಮ್ ಕಂಡುಕೊಳ್ಳಲು ಎದುರು ನೋಡುತ್ತಿದ್ದಾರೆ. 

ಮಯಾಂಕ್ -ಕೊಹ್ಲಿ ಫಿಫ್ಟಿ: ಬೃಹತ್ ಮೊತ್ತದತ್ತ ಭಾರತ

ವಿಜಯ್’ಗೆ ಸಂಕಷ್ಟ: ಪದೇ ಪದೇ ಗಾಯಕ್ಕೆ ತುತ್ತಾಗುತ್ತಿರುವ ವಿಜಯ್ ಶಂಕರ್ ಇದೀಗ ಭಾರತ ’ಎ’ ತಂಡದಿಂದಲೂ ಹೊರಬಿದ್ದಿದ್ದಾರೆ. ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದ ವಿಜಯ್ ಶಂಕರ್, ಅಂತಹ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿರಲಿಲ್ಲ. ಅಲ್ಲದೆ ಟೂರ್ನಿಯ ಮಧ್ಯದಲ್ಲೇ ಗಾಯಗೊಂಡು ತಂಡದಿಂದ ಹೊರಬಿದ್ದಿದ್ದರು. ಮ್