ಅನಧಿಕೃತ ಒನ್ ಡೇ: ಭಾರತ ’ಎ’ಗೆ 69 ರನ್ ಜಯ
ಶಿವಂ ದುಬೆ, ಅಕ್ಷರ್ ಪಟೇಲ್ ಆಕರ್ಷಕ ಬ್ಯಾಟಿಂಗ್, ಯುಜುವೇಂದ್ರ ಚಹಲ ಚಾಣಾಕ್ಷ ಬೌಲಿಂಗ್ ನೆರವಿನಿಂದ ದಕ್ಷಿಣ ಆಫ್ರಿಕಾ ’ಎ’ ವಿರುದ್ಧ ಭಾರತ ’ಎ’ ತಂಡವು 69 ರನ್‌ಗಳ ಜಯ ಸಾಧಿಸಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
"
ತಿರುವನಂತಪುರಂ[ಆ.30]: ಸ್ಪಿನ್ನರ್ ಯಜುವೇಂದ್ರ ಚಹಲ್ (5-47) ಸ್ಪಿನ್ ಮೋಡಿ ನೆರವಿನಿಂದ ಭಾರತ ‘ಎ’, ದಕ್ಷಿಣ ಆಫ್ರಿಕಾ ‘ಎ’ ವಿರುದ್ಧದ ಮೊದಲ ಅನಧಿಕೃತ ಏಕದಿನ ಪಂದ್ಯದಲ್ಲಿ 69 ರನ್ ಗಳ ಗೆಲುವು ದಾಖಲಿಸಿತು.
ಸೌತ್ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾ ಪ್ರಕಟ!
ಮಳೆಯಿಂದಾಗಿ ಪಂದ್ಯವನ್ನು 47 ಓವರ್ ಗಳಿಗೆ ಸೀಮಿತಗೊಳಿಸಲಾದ ಪಂದ್ಯದಲ್ಲಿ ಗುರುವಾರ ಮೊದಲು ಬ್ಯಾಟ್ ಮಾಡಿದ ಭಾರತ ‘ಎ’ ಶಿವಂ ದುಬೆ (79*), ಅಕ್ಷರ್ ಪಟೇಲ್ (60*) ರನ್‌ನಿಂದಾಗಿ 6 ವಿಕೆಟ್‌ಗೆ 327 ರನ್ ಗಳಿಸಿತು. ಆದರೆ ಶುಭ್’ಮನ್ ಗಿಲ್ 46 ಹಾಗೂ ನಾಯಕ ಮನೀಶ್ ಪಾಂಡೆ ಬೃಹತ್ ಮೊತ್ತ ಕಲೆ ಹಾಕಲು ವಿಫಲರಾದರು.
MS ಧೋನಿ ಭವಿಷ್ಯ ಇನ್ನೂ ಸಸ್ಪೆನ್ಸ್!
ಈ ಬೃಹತ್ ಗುರಿ ಬೆನ್ನತ್ತಿದ ದ. ಆಫ್ರಿಕಾ ‘ಎ’ ಹೆಂಡ್ರಿಕ್ಸ್ (110), ಕ್ಲಾಸೆನ್ (58) ಹೊರತಾಗಿಯೂ 45 ಓವರಲ್ಲಿ 258 ರನ್ ಗಳಿಗೆ ಆಲೌಟ್ ಆಯಿತು.
ಸ್ಕೋರ್:
ಭಾರತ ‘ಎ’ 327/6
ದ.ಆಫ್ರಿಕಾ ‘ಎ’ 258/10