ಇದಕ್ಕೂ ಮೊದಲು ಅಂದರೆ ನಿಗದಿತ ಅವಧಿಯೊಳಗೆ ಎಐಟಿಎ, 2014ರ ಇಂಚಾನ್ ಏಷ್ಯನ್ ಗೇಮ್ಸ್'ನಲ್ಲಿ ಚಿನ್ನ ಗೆದ್ದಿದ್ದ ಸಾಕೇತ್ ಮೈನೇನಿ ಹೆಸರನ್ನು ಶಿಫಾರಸು ಮಾಡಿತ್ತು.

ನವದೆಹಲಿ(ಆ.06): ಪ್ರತಿಷ್ಠಿತ ಅರ್ಜುನ ಪ್ರಶಸ್ತಿ ಕೈತಪ್ಪಿದ್ದಕ್ಕೆ ಟೆನಿಸ್ ಆಟಗಾರ ರೋಹನ್ ಬೋಪಣ್ಣ ಆಕ್ರೋಶ ವ್ಯಕ್ತಪಡಿಸಿದ್ದು, ಅಖಿಲ ಭಾರತ ಟೆನಿಸ್ ಅಸೋಸಿಯೇಷನ್(ಎಐಟಿಎ) ನಿಗದಿತ ಅವಧಿಯೊಳಗೆ ತನ್ನ ಅರ್ಜಿಯನ್ನು ಸಲ್ಲಿಸದೇ ಮತ್ತೊಮ್ಮೆ ನಿರ್ಲಕ್ಷ್ಯ ತೋರಿದೆ ಎಂದು ಕಿಡಿಕಾರಿದ್ದಾರೆ.

ಅರ್ಜುನ ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಏಪ್ರಿಲ್ 28 ಕೊನೆಯ ದಿನವಾಗಿತ್ತು. ಆದರೆ, ಫ್ರೆಂಚ್ ಓಪನ್ ಮಿಶ್ರ ಡಬಲ್ಸ್ ಗೆದ್ದ ಬೋಪಣ್ಣರ ಅರ್ಜಿಯನ್ನು ಎಐಟಿಎ, ಜೂನ್ 14ರಂದು ಸಲ್ಲಿಸಿತ್ತು.

ಇದಕ್ಕೂ ಮೊದಲು ಅಂದರೆ ನಿಗದಿತ ಅವಧಿಯೊಳಗೆ ಎಐಟಿಎ, 2014ರ ಇಂಚಾನ್ ಏಷ್ಯನ್ ಗೇಮ್ಸ್'ನಲ್ಲಿ ಚಿನ್ನ ಗೆದ್ದಿದ್ದ ಸಾಕೇತ್ ಮೈನೇನಿ ಹೆಸರನ್ನು ಶಿಫಾರಸು ಮಾಡಿತ್ತು.

Scroll to load tweet…

ಇದೇ ವೇಳೆ ಅರ್ಜುನ ಪ್ರಶಸ್ತಿಗೆ ಆಯ್ಕೆಯಾದ ಸಾಕೇತ್ ಮೈನೇನಿಗೆ ಕನ್ನಡಿಗ ಬೋಪಣ್ಣ ಶುಭಾಶಯ ಕೋರಿದ್ದಾರೆ.