ಮುಂಬೈ(ಮಾ.12): ಇಂಡಿಯನ್ ಪ್ರೀಮಿಯರ್ ಲೀಗ್‌ನ ಎಲ್ಲಾ 8 ತಂಡಗಳಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಾರ್ಷಿಕ ₹250 ಕೋಟಿ ಪಾವತಿಸಲಿದೆ ಎಂದು ವರದಿಯಾಗಿದೆ.

ಮಾಧ್ಯಮ ಹಾಗೂ ಪ್ರಸಾರ ಹಕ್ಕಿನಿಂದ ಬಿಸಿಸಿಐಗೆ ಭಾರೀ ಹಣ ದೊರೆಯಲಿದ್ದು, ಕೇಂದ್ರ ಆದಾಯದಿಂದ ತಂಡಗಳಿಗೆ ನೀಡುವ ಮೊತ್ತವನ್ನು 4 ಪಟ್ಟು ಹೆಚ್ಚಿಸಲು ನಿರ್ಧರಿಸಲಾಗಿದೆ ಎನ್ನಲಾಗಿದೆ. ಮೊದಲ ಆವೃತ್ತಿಯಿಂದಲೂ ಎಲ್ಲಾ ತಂಡಗಳಿಗೆ ಬಿಸಿಸಿಐ ವಾರ್ಷಿಕ ₹60 ಕೋಟಿ ನೀಡುತ್ತಿತ್ತು.

ಇತ್ತೀಚೆಗೆ ಸ್ಟಾರ್ ಸ್ಪೋರ್ಟ್ಸ್ ಸಂಸ್ಥೆ 5 ವರ್ಷದ ಅವಧಿಗೆ ₹16,347 ಕೋಟಿ ನೀಡಿ ಪ್ರಸಾರ ಹಕ್ಕು ಖರೀದಿಸಿತ್ತು. ಹೀಗಾಗಿ ಐಪಿಎಲ್‌'ನಿಂದ ಬಿಸಿಸಿಐಗೆ ವಾರ್ಷಿಕ ₹3200 ಕೋಟಿ ಸಿಗಲಿದೆ. ಈ ಮೊದಲು ಪ್ರಸಾರ ಹಕ್ಕು ಹೊಂದಿದ್ದ ಸೋನಿ ಸಂಸ್ಥೆ ಬಿಸಿಸಿಐಗೆ ವಾರ್ಷಿಕ ₹800 ಕೋಟಿ ನೀಡುತ್ತಿತ್ತು.