Asianet Suvarna News Asianet Suvarna News

ಧೋನಿ ಪರ ಬ್ಯಾಟ್ ಬೀಸಿದ ಸೆಹ್ವಾಗ್

ಇಲ್ಲಿಯವರೆಗೆ ಧೋನಿ 10ನೇ ಆವೃತ್ತಿಯ ಐಪಿಎಲ್'ನಲ್ಲಿ ನಾಲ್ಕು ಪಂದ್ಯಗಳಲ್ಲಿ ಕೇವಲ 33ರನ್'ಗಳನ್ನಷ್ಟೇ ಬಾರಿಸಿದ್ದಾರೆ.

IPL should not be a platform to judge an experienced player like MS Dhoni
  • Facebook
  • Twitter
  • Whatsapp

ನವದೆಹಲಿ(ಏ.15): ಟೀಂ ಇಂಡಿಯಾದ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿ ಬ್ಯಾಟಿಂಗ್ ಬಗ್ಗೆ ಸಾಕಷ್ಟು ಪ್ರಶ್ನೆಗಳೇಳುತ್ತಿರುವ ಬೆನ್ನಲ್ಲೇ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಅವರ ಬೆಂಬಲಕ್ಕೆ ನಿಂತಿದ್ದಾರೆ.

ಮಹೇಂದ್ರ ಸಿಂಗ್ ಧೋನಿ ಖಂಡಿತ ಮತ್ತೆ ಫಾರ್ಮ್'ಗೆ ಮರಳುತ್ತಾರೆ. ಧೋನಿಯಂತಹ ಅನುಭವಿ ಆಟಗಾರನ ಸಾಮರ್ಥ್ಯವನ್ನು ಐಪಿಎಲ್'ನಿಂದ ಅಳೆಯಲು ಸಾಧ್ಯವಿಲ್ಲ. ಇನ್ನು ಐಪಿಎಲ್'ನಲ್ಲಿ ಸಾಕಷ್ಟು ಪಂದ್ಯಗಳಿವೆ. ಕೇವಲ ಮೂರ್ನಾಲ್ಕು ಪಂದ್ಯಗಳಿಂದ ಧೋನಿಯನ್ನು ಜಡ್ಜ್ ಮಾಡುವುದು ಸರಿಯಲ್ಲ ಎಂದಿದ್ದಾರೆ.

ಇತ್ತೀಚೆಗಷ್ಟೇ ಇಂಗ್ಲೆಂಡ್ ವಿರುದ್ಧ ಏಕದಿನ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿ ಪಂದ್ಯವನ್ನು ಗೆಲ್ಲಿಸಿಕೊಟ್ಟಿದ್ದಾರೆ. ಧೋನಿಯಿಲ್ಲದೇ ಟೀಂ ಇಂಡಿಯಾ ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸುವುದನ್ನು ಊಹಿಸಲೂ ಸಾಧ್ಯವಿಲ್ಲ ಎಂದು ಡೆಲ್ಲಿ ಡ್ಯಾಷರ್ ಸೆಹ್ವಾಗ್ ಹೇಳಿದ್ದಾರೆ.

ಈ ಹಿಂದೆ ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಹಾಗೂ ಆಸಿಸ್ ಮಾಜಿ ನಾಯಕ ಮೈಕಲ್ ಕ್ಲಾರ್ಕ್ ಧೋನಿ ಬ್ಯಾಟಿಂಗ್ ಬಗ್ಗೆ ಧ್ವನಿಯೆತ್ತಿದ್ದರು.

ಇಲ್ಲಿಯವರೆಗೆ ಧೋನಿ 10ನೇ ಆವೃತ್ತಿಯ ಐಪಿಎಲ್'ನಲ್ಲಿ ನಾಲ್ಕು ಪಂದ್ಯಗಳಲ್ಲಿ ಕೇವಲ 33ರನ್'ಗಳನ್ನಷ್ಟೇ ಬಾರಿಸಿದ್ದಾರೆ.

Follow Us:
Download App:
  • android
  • ios