ಜೈಪುರ(ಮಾ.26): ಐಪಿಎಲ್‌ ಟ್ರೋಫಿ ಗೆಲ್ಲಬೇಕು ಎನ್ನುವ ಉದ್ದೇಶದಿಂದ ಸಿನಿಮಾ ತೊರೆದೆ ಎಂದು ಕಿಂಗ್ಸ್‌ ಇಲೆವೆನ್‌ ತಂಡದ ಒಡತಿ, ಬಾಲಿವುಡ್‌ ನಟಿ ಪ್ರೀತಿ ಝಿಂಟಾ ಹೇಳಿಕೊಂಡಿದ್ದಾರೆ. 12ನೇ ಆವೃತ್ತಿಯಲ್ಲಿ ತಂಡದ ಮೊದಲ ಪಂದ್ಯಕ್ಕೂ ಮುನ್ನ ರಾಷ್ಟ್ರೀಯ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಬೂಮ್ರಾ ಗಾಯದ ಬಗ್ಗೆ ಆತಂಕ ಬೇಡ: ಬಿಸಿಸಿಐ

‘ಕಿಂಗ್ಸ್‌ ಇಲೆವೆನ್‌ ತಂಡ ನನ್ನ ಮೊದಲ ಉದ್ಯಮ. ಬಾಲ್ಯದಿಂದಲೂ ಉದ್ಯಮಿಯಾಗಬೇಕು ಎನ್ನುವ ಕನಸಿತ್ತು. ಕಿಂಗ್ಸ್‌ ಇಲೆವೆನ್‌ ನನ್ನ ಮಗುವಿದ್ದಂತೆ. 12 ವರ್ಷಗಳಲ್ಲಿ ತಂಡ ಒಮ್ಮೆಯೂ ಟ್ರೋಫಿ ಗೆದ್ದಿಲ್ಲ. ಶೀಘ್ರದಲ್ಲೇ ಪ್ರಶಸ್ತಿ ಗೆಲ್ಲುವ ನಂಬಿಕೆ ಇದೆ. ತಂಡವನ್ನು ಸರಿಯಾದ ದಾರಿಯಲ್ಲಿ ಮುನ್ನಡೆಸಿಕೊಂಡು ಹೋಗುವ ಸಲುವಾಗಿ ನಾನು ಚಿತ್ರಗಳಲ್ಲಿ ನಟಿಸುವುದನ್ನೇ ಬಿಟ್ಟಿದ್ದೇನೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಈ ಸಲ ಕಪ್ ನಮ್ದಾಗುತ್ತಾ? ಇಲ್ಲಿದೆ RCB ಅಭಿಮಾನಿಗಳ ಪ್ರತಿಕ್ರಿಯೆ!

ಈ ವರ್ಷ ಅತ್ಯುತ್ತಮ ತಂಡವನ್ನೇ ಆಯ್ಕೆ ಮಾಡಿದ್ದೇವೆ. 12ನೇ ಆವೃತ್ತಿ ಐಪಿಎಲ್ ಸ್ಮರಣೀಯವಾಗೋದರಲ್ಲಿ ಯಾವುದೇ ಅನುಮಾವಿಲ್ಲ. ತಂಡ ಬ್ಯಾಲೆನ್ಸಿಂಗ್ ಆಗಿದೆ. ಹೀಗಾಗಿ ಈ ಭಾರಿ ಪ್ರಶಸ್ತಿ ಗೆಲ್ಲೋ ವಿಶ್ವಾಸವಿದೆ ಎಂದು ಪ್ರೀತಿ ಹೇಳಿದ್ದಾರೆ.