ಐಪಿಎಲ್ ಪ್ರದರ್ಶನವನ್ನ ಟೆಸ್ಟ್, ಏಕದಿನ ಆಯ್ಕೆಗೆ ಪರಿಗಣಿಸಲ್ಲ- ಬಿಸಿಸಿಐ!
ಟೀಂ ಇಂಡಿಯಾ ಆಯ್ಕೆಗೆ ಹಲವಾರು ಮಾನದಂಡಗಳಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಐಪಿಎಲ್ ಟೂರ್ನಿ ಪ್ರದರ್ಶನದ ಮೇರೆಗೆ ಆಯ್ಕೆಗಳು ನಡೆದಿದೆ. ಇದೀಗ ಐಪಿಎಲ್ ಪ್ರದರ್ಶನದಿಂದ ಟೆಸ್ಟ್ ಮತ್ತು ಏಕದಿನ ತಂಡಕ್ಕೆ ಆಯ್ಕೆಗೆ ಪರಿಗಣಿಸಲ್ಲ ಎಂದು ಬಿಸಿಸಿಐ ಹೇಳಿದೆ. ಇಲ್ಲಿದೆ ಹೆಚ್ಚಿನ ವಿವರ.
ಮುಂಬೈ(ಫೆ.02): ಐಪಿಎಲ್ ಟೂರ್ನಿ ಹಲವು ಯುವ ಪ್ರತಿಭೆಗಳನ್ನ ಬೆಳಕಿಗೆ ತಂದಿದೆ. ಜಸ್‌ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ, ಕುಲ್ದೀಪ್ ಯಾದವ್ ಸೇರಿದಂತೆ ಹಲವು ಯುವ ಕ್ರಿಕೆಟಿಗರು ಟೀಂ ಇಂಡಿಯಾಗೂ ಪಾದಾರ್ಪಣೆ ಮಾಡಿದ್ದಾರೆ. ಆದರೆ ಐಪಿಎಲ್ ಪ್ರದರ್ಶನವನ್ನ ಟಿ20 ಕ್ರಿಕೆಟ್‌ಗೆ ಮಾತ್ರ ಪರಿಗಣಿಸಲಾಗುವುದು ಎಂದು ಟೀಂ ಇಂಡಿಯಾ ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್.ಕೆ.ಪ್ರಸಾದ್ ಹೇಳಿದ್ದಾರೆ.
ಇದನ್ನೂ ಓದಿ: ಐಪಿಎಲ್ ತಂಡದ ಆಟಗಾರರ ಒಟ್ಟು ವೇತನ-ಯಾವ ತಂಡಕ್ಕೆ ಮೊದಲ ಸ್ಥಾನ?
ಐಪಿಎಲ್ ಪ್ರದರ್ಶನದಿಂದ ಟೀಂ ಇಂಡಿಯಾದ ಟಿ20 ತಂಡವನ್ನ ಸೇರಿಕೊಳ್ಳಬಹುದು. ಆದರೆ ಏಕದಿನ ಹಾಗೂ ಟೆಸ್ಟ್ ತಂಡಕ್ಕೆ ಐಪಿಎಲ್ ಪ್ರದರ್ಶನ ಪರಿಗಣಿಸಲ್ಲ. ಭಾರತ ಟಿ20 ತಂಡದಲ್ಲಿ ಸ್ಥಿರ ಪ್ರದರ್ಶನ ನೀಡೋ ಕ್ರಿಕೆಟಿಗರನ್ನ ಸೂಕ್ತ ಸಂದರ್ಭದಲ್ಲಿ ಏಕದಿನಲ್ಲಿ ಅವಕಾಶ ನೀಡಲಾಗುತ್ತೆ. ಇಲ್ಲೂ ಗಮನಸೆಳೆದರೆ ಟೆಸ್ಟ್ ತಂಡಕ್ಕೆ ಆಯ್ಕೆ ಮಾಡಲಾಗುತ್ತೆ ಎಂದು ಪ್ರಸಾದ್ ಹೇಳಿದ್ದಾರೆ.
ಇದನ್ನೂ ಓದಿ: ಐಪಿಎಲ್ 2019: ಇಲ್ಲಿದೆ RCB ತಂಡದ ಬೆಸ್ಟ್ ಪ್ಲೇಯಿಂಗ್ ಇಲೆವೆನ್ !
ರಣಜಿ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಕ್ರಿಕೆಟಿಗರು ನೇರವಾಗಿ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಹೀಗಾಗಿ ಟೆಸ್ಟ್ ಆಯ್ಕೆಗೆ ರಣಜಿ ತಂಡದ ಪ್ರದರ್ಶನ ಮುಖ್ಯವಾಗುತ್ತೆ ಎಂದು ಪ್ರಸಾದ್ ಹೇಳಿದ್ದಾರೆ.