ಜೈಪುರ(ಮಾ.16): 12ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡೋ ಮೂಲಕ ವಿಶ್ವಕಪ್ ತಂಡ ಸೇರಿಕೊಳ್ಳೋ ವಿಶ್ವಾಸವಿದೆ ಎಂದು ಟೀಂ ಇಂಡಿಯಾ ಬ್ಯಾಟ್ಸ್‌ಮನ್ ಅಜಿಂಕ್ಯ ರಹಾನೆ ಹೇಳಿದ್ದಾರೆ. ಆದರೆ ನಾಯಕ ವಿರಾಟ್ ಕೊಹ್ಲಿ, ವಿಶ್ವಕಪ್ ಟೂರ್ನಿಗೆ ಐಪಿಎಲ್ ಪ್ರದರ್ಶನ ಪರಿಗಣಿಸಲ್ಲ ಎಂದಿದ್ದಾರೆ.  ಹೀಗಾಗಿ ಕೊಹ್ಲಿ ಹಾಗೂ ರಹಾನೆ ಹೇಳಿಗೆ ಇದೀಗ ಗೊಂದಲ ಸೃಷ್ಟಿಸಿದೆ. 

ಇದನ್ನೂ ಓದಿ: ಐಪಿಎಲ್ ಕ್ರಿಕೆಟ್, ವಿಶ್ವಕಪ್ ತಂಡದ ಆಯ್ಕೆ -ಕೊಹ್ಲಿ ಬಿಚ್ಟಿಟ್ಟ ಸತ್ಯ!

ಸದ್ಯ ಐಪಿಎಲ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಬೇಕು. ಯಾವುದೇ ಒತ್ತಡವಿಲ್ಲದೆ ಕಣಕ್ಕಿಳಿಯಲಿದ್ದೇನೆ. ಈ ಮೂಲಕ ವಿಶ್ವಕಪ್ ಟೂರ್ನಿಗೂ ಆಯ್ಕೆಯಾಗೋ ವಿಶ್ವಾಸವಿದೆ. ಎಂದಿದ್ದಾರೆ.ಅಂಬಾಟಿ ರಾಯುಡು  ಕಳಪೆ ಪ್ರದರ್ಶನದಿಂದ ತಂಡದ ನಾಲ್ಕನೇ ಕ್ರಮಾಂಕ ಭರ್ತಿಯಾಗಿಲ್ಲ. ಹೀಗಾಗಿ ಈ ಸ್ಥಾನಕ್ಕಾಗಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಪೈಪೋಟಿ ಆರಂಭವಾಗಿದೆ.
ಇದನ್ನೂ ಓದಿ: ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾ ರೆಡಿ - ಕೊಹ್ಲಿ!

ವಿಶ್ವಕಪ್ ತಂಡದ ಆಯ್ಕೆಯಲ್ಲಿ ಐಪಿಎಲ್ ಪ್ರದರ್ಶನ ಪರಿಗಣಿಸುವುದಿಲ್ಲ ಎಂದು  ಆಸಿಸ್ ವಿರುದ್ಧದ ಸರಣಿ ಆರಂಭಕ್ಕೂ ಮುನ್ನ ನಾಯಕ ವಿರಾಟ್ ಕೊಹ್ಲಿ ಹೇಳಿದ್ದರು. ಈ ಮೂಲಕ ಆಸಿಸ್ ವಿರುದ್ಧದ ಸರಣಿಗೆ ಆಯ್ಕೆಯಾದ ತಂಡವೇ ಬಹುತೇಕ ಅಂತಿಮ ಅನ್ನೋ ಸೂಚನೆ ನೀಡಿದ್ದರು. ಆದರೆ ರಹಾನೆ ಐಪಿಎಲ್ ಮೂಲಕ ತಂಡ ಸೇರಿಕೊಳ್ಳೋ ವಿಶ್ವಾಸ ವ್ಯಕ್ತಪಡಿಸಿದ್ದಾರೆ.