Asianet Suvarna News Asianet Suvarna News

ಮುಂಬೈ ಇಂಡಿಯನ್ಸ್ ಚಾಂಪಿಯನ್ ಮಾಡಿದ ಆ ಓವರ್ ನಿಮಗಾಗಿ

ಆ ಓವರ್ ಪ್ರಸಕ್ತ ಸಾಲಿನಲ್ಲಿ ಕ್ರಿಕೆಟ್ ಪ್ರೇಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿತ್ತು ಎಂದರೆ ತಪ್ಪಾಗಲಾರದು.

IPL Most Memorable Over
  • Facebook
  • Twitter
  • Whatsapp

ಬೆಂಗಳೂರು(ಮೇ.23): 10ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಸಾಕಷ್ಟು ರೋಚಕ ಸನ್ನಿವೇಶಗಳಿಗೆ ಸಾಕ್ಷಿಯಾಗಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ನಡುವಿನ ಕಾದಾಟದಲ್ಲಿ ಒಂದರ್ಥದಲ್ಲಿ ಕೊನೆಗೂ ಬೌಲಿಂಗ್ ಪ್ರದರ್ಶನವೇ ಪ್ರಶಸ್ತಿ ಗೆಲ್ಲಲು ಕಾರಣವಾಯ್ತು ಎಂದರೆ ಅತಿಶಯೋಕ್ತಿಯಲ್ಲ.

ಹೌದು ಐಪಿಎಲ್ ಫೈನಲ್ ಪಂದ್ಯದಲ್ಲಿ ರೈಸಿಂಗ್ ಪುಣೆ ಸೂಪರ್'ಜೈಂಟ್ ತಂಡ ಕೇವಲ ಒಂದು ರನ್ ಅಂತರದಲ್ಲಿ ಮುಗ್ಗರಿಸಿ ಚಾಂಪಿಯನ್ ಪಟ್ಟ ತಪ್ಪಿಸಿಕೊಂಡಿತು. ಮುಂಬೈ ಪರ ಚಾಣಾಕ್ಷ ಬೌಲಿಂಗ್ ನಡೆಸಿದ ಮಿಚೆಲ್ ಜಾನ್ಸನ್ ತಮ್ಮ ತಂಡವನ್ನು ಗೆಲುವಿನ ಕೇಕೆ ಹಾಕುವಂತೆ ಮಾಡುವಲ್ಲಿ ಯಶಸ್ವಿಯಾದರು. ಆ ಓವರ್ ಪ್ರಸಕ್ತ ಸಾಲಿನಲ್ಲಿ ಕ್ರಿಕೆಟ್ ಪ್ರೇಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿತ್ತು ಎಂದರೆ ತಪ್ಪಾಗಲಾರದು.

ಅಂತಿಮ ಓವರ್'ನಲ್ಲಿ ಪುಣೆ ಗೆಲ್ಲಲು ಕೇವಲ 11ರನ್'ಗಳ ಅವಶ್ಯಕತೆಯಿತ್ತು. ರೋಚಕತೆಯಿಂದ ಕೂಡಿದ್ದ ಆ ಓವರ್ ನೋಡಲು ಮಿಸ್ ಮಾಡಿಕೊಂಡವರು ಮತ್ತೊಮ್ಮೆ ಆ ವಿಡಿಯೋವನ್ನೀಗ ನೀವಿಲ್ಲಿ ನೋಡಬಹುದು...

Follow Us:
Download App:
  • android
  • ios