ಐಪಿಎಲ್ ಟೂರ್ನಿ ಹಲವು ಕ್ರಿಕೆಟಿಗರಿಗೆ ಹೊಸ ಬದುಕು ಕಟ್ಟಿಕೊಡಲು ನೆರವಾಗಿದೆ. ಇದೀಗ ಆಸ್ಟ್ರೇಲಿಯಾ ಕ್ರಿಕೆಟಿಗರ ಐಪಿಎಲ್ ಟೂರ್ನಿ ಆದಾಯದಿಂದ ತಮ್ಮ ಕನಸು ನನಸು ಮಾಡಿಕೊಂಡಿದ್ದಾರೆ.

ಸಿಡ್ನಿ(ಸೆ.22): ಐಪಿಎಲ್ ಟೂರ್ನಿ ಕೇವಲ ಭಾರತೀಯ ಪ್ರತಿಭೆಗಳಿಗೆ ಮಾತ್ರವಲ್ಲ, ವಿದೇಶಿ ಆಟಗಾರರಿಗೂ ಅತ್ಯುತ್ತಮ ವೇದಿಕೆಯಾಗಿದೆ. ಹಲವು ವಿದೇಶಿ ಕ್ರಿಕೆಟಿಗರು ಐಪಿಎಲ್ ಮೂಲಕ ತಮ್ಮ ರಾಷ್ಟ್ರೀಯ ತಂಡ ಸೇರಿಕೊಂಡಿದ್ದಾರೆ. ಇಷ್ಟೇ ಅಲ್ಲ ಹಲವರ ಆರ್ಥಿಕ ಪರಿಸ್ಥಿತಿಯನ್ನೂ ಉತ್ತಮಗೊಳಿಸಿದೆ.

ಐಪಿಎಲ್ ಟೂರ್ನಿ ಮೂಲಕ ಟಿ20 ಕ್ರಿಕೆಟಿನಾಗಿ ಹೊರಹೊಮ್ಮಿದ ಆಂಡ್ರ್ಯೂ ಟೈ ಇದೀಗ ಆಸ್ಟ್ರೇಲಿಯಾ ತಂಡದಲ್ಲೂ ಮಿಂಚಿನ ಪ್ರದರ್ಶನ ನೀಡುತ್ತಿದ್ದಾರೆ. ಐಪಿಎಲ್ ಸೇರಿಕೊಂಡ ಬಳಿಕ ಟೈ ಅದೃಷ್ಠ ಬದಲಾಗಿದೆ. ಜೊತೆಗೆ ತಮ್ಮ ಕನಸು ಕೂಡ ನನಸಾಗಿದೆ.

11ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ಟೈ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಸೇರಿಕೊಂಡಿದ್ದರು. ಪಂಜಾಬ್ ಫ್ರಾಂಚೈಸಿ ಆಂಡ್ರ್ಯೂ ಟೈಗೆ 7.2 ಕೋಟಿ ನೀಡಿತ್ತು. ಇದೀಗ ಟೈ ಐಪಿಎಲ್ ಹಣದಿಂದ ಮರ್ಸಡೀಸ್ ಬೆಂಜ್ ಕಾರು ಖರೀದಿಸಿದ್ದಾರೆ. ಹೊಸ ಕಾರು ಖರೀದಿಸಿ ಟೈ, ಸಾಮಾಜಿಕ ಜಾಲತಾಣದಲ್ಲಿ ಸಂತಸವನ್ನ ಹಂಚಿಕೊಂಡಿದ್ದಾರೆ. 

View post on Instagram