ಸಿಎಸ್’ಕೆ ಕಪ್ ಗೆಲ್ಲಲು 179 ಟಾರ್ಗೆಟ್

IPL Final : SRH Set 179 Target to CSK
Highlights


ಯೂಸುಪ್ ಪಠಾಣ್-ಕೇನ್ ವಿಲಿಯಮ್ಸನ್ ಆಕರ್ಷಕ ಬ್ಯಾಟಿಂಗ್ ನೆರವಿನಿಂದ 178 ರನ್ ಕಲೆಹಾಕಿದ್ದು, ಚೆನ್ನೈಗೆ ಗೆಲ್ಲಲು 179 ರನ್’ಗಳ ಟಾರ್ಗೆಟ್ ನೀಡಿದೆ. ತೀವ್ರ ಕುತೂಹಲ ಮೂಡಿಸಿರುವ ಪಂದ್ಯದಲ್ಲಿ ಬಲಿಷ್ಠ ಬೌಲಿಂಗ್ ಲೈನ್’ಅಪ್ ಹೊಂದಿರುವ ಸನ್’ರೈಸರ್ಸ್ ಹೈದರಾಬಾದ್ 179 ರನ್’ಗಳನ್ನು ರಕ್ಷಿಸಿಕೊಳ್ಳುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

ಮುಂಬೈ[ಮೇ.27]: ಯೂಸುಪ್ ಪಠಾಣ್-ಕೇನ್ ವಿಲಿಯಮ್ಸನ್ ಆಕರ್ಷಕ ಬ್ಯಾಟಿಂಗ್ ನೆರವಿನಿಂದ 178 ರನ್ ಕಲೆಹಾಕಿದ್ದು, ಚೆನ್ನೈಗೆ ಗೆಲ್ಲಲು 179 ರನ್’ಗಳ ಟಾರ್ಗೆಟ್ ನೀಡಿದೆ.

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಸನ್’ರೈಸರ್ಸ್ ಹೈದರಾಬಾದ್ ಆರಂಭದಲ್ಲೇ ಶ್ರೀವಾತ್ಸವ್ ಗೋಸ್ವಾಮಿ ವಿಕೆಟ್ ಕಳೆದುಕೊಂಡಿತು. ಆ ಬಳಿಕ ಶಿಖರ್ ಧವನ್ ಹಾಗೂ ನಾಯಕ ಕೇನ್ ವಿಲಿಯಮ್ಸನ್ ಎಚ್ಚರಿಕೆಯ ಆಟವಾಡುವ ಮೂಲಕ ತಂಡದ ಮೊತ್ತವನ್ನು 50ರ ಗಡಿ ದಾಟಿಸಿದರು. ಧವನ್ 26 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ವಿಲಿಯಮ್ಸನ್ 47 ರನ್ ಚಚ್ಚಿದರು. ಕೊನೆಯಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ ಯೂಸುಪ್ ಪಠಾಣ್ ಕೇವಲ 25 ಎಸೆತಗಳಲ್ಲಿ 45 ರನ್ ಚಚ್ಚುವ ಮೂಲಕ ತಂಡದ ಮೊತ್ತವನ್ನು 170ರ ದಾಟಿಸುವಲ್ಲಿ ಯಶಸ್ವಿಯಾದರು. ಕೊನೆಯಲ್ಲಿ ಕಾರ್ಲೋಸ್ ಬ್ರಾಥ್’ವೈಟ್ 11 ಎಸೆತಗಳಲ್ಲಿ 21 ಬಾರಿಸಿದರು.

ಸಿಎಸ್’ಕೆ ಪರ ಎನ್ಜಿಡಿ, ಶಾರ್ದೂಲ್ ಠಾಕೂರ್, ಕರುಣ್ ಶರ್ಮಾ, ಬ್ರಾವೋ ಹಾಗೂ ಜಡೇಜಾ ತಲಾ ಒಂದೊಂದು ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್: 

SRH: 178/6

ಕೇನ್ ವಿಲಿಯಮ್ಸನ್: 47

ಜಡೇಜಾ: 24/1

[* ವಿವರ ಅಪೂರ್ಣ] 

loader