ಮುಂಬೈ(ನ.06): 2019ರ ಲೋಕಸಭಾ ಚುನಾವಣೆ ಹಾಗೂ ವಿಶ್ವಕಪ್ ಟೂರ್ನಿಯಿಂದ ಈಗಾಗಲೇ ಬಿಸಿಸಿಐನಲ್ಲಿ ಐಪಿಎಲ್ ಸಿದ್ಧತೆಗಳು ಭರದಿಂದ ನಡೆಯುತ್ತಿದೆ. 2019ರ ಐಪಿಎಲ್ ಟೂರ್ನಿ ಆಯೋಜನೆ ಕುರಿತು ಬಿಸಿಸಿಐ ಇನ್ನು ಅಂತಿಮ ನಿರ್ಧಾರ ಕೈಗೊಂಡಿಲ್ಲ. ಆದರೆ ಆಟಗಾರರ ಹರಾಜು(ಆಕ್ಷನ್) ದಿನಾಂಕ ಪ್ರಕಟಗೊಂಡಿದೆ.

ಡಿಸೆಂಬರ್  18 ರಂದು ಐಪಿಎಲ್ ಆಟಗಾರರ ಹರಾಜು ನಡೆಯಲಿದೆ. ಆದರೆ ಈ ಬಾರಿ ಬಿಸಿಸಿಐ ಸಂಪ್ರದಾಯ ಮುರಿದಿದೆ. ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆ ಪ್ರತಿ ವರ್ಷ ಬೆಂಗಳೂರಿನಲ್ಲಿ ಆಯೋಜಿಸಲಾಗುತ್ತಿತ್ತು. ಆದರೆ ಈ ಬಾರಿ ಜೈಪುರಕ್ಕೆ ಸ್ಥಳಾಂತರಿಸಿದೆ. 

ಬಿಸಿಸಿಐ ದಿನಾಂಕ ಪ್ರಕಟಿಸುತ್ತಿದ್ದಂತೆ, ಫ್ರಾಂಚೈಸಿ ಮಾಲೀಕರಿಂದ ವಿರೋಧ ವ್ಯಕ್ತವಾಗಿದೆ.  ಕಾರಣ ಟೂರ್ನಿ ಆಯೋಜನೆ ಎಲ್ಲಿ ಅನ್ನೋದು ಸ್ಪಷ್ಟವಾಗಿಲ್ಲ. ಯುಎಇ ಅಥವಾ ಸೌತ್ಆಫ್ರಿಕಾಗೆ ಸ್ಥಳಾಂತರಿಸಲು ಚಿಂತನೆ ನಡೆಸಿದೆ. ಹೀಗಾಗಿ ಪಿಚ್‌ಗೆ ಅನಗುಣವಾಗಿ ಆಟಗಾರರ ಹರಾಜಿನಲ್ಲಿ ಖರೀದಿಸಬೇಕು. ಹೀಗಾಗಿ ಮೊದಲು ಟೂರ್ನಿ ಆಯೋಜನೆ ಕುರಿತು ಸ್ಪಷ್ಟಪಡಿಸಿ. ಬಳಿಕ ಹರಾಜು ದಿನಾಂಕ ಪ್ರಕಟಿಸಿ ಎಂದು ಫ್ರಾಂಚೈಸಿಗಳು ಹೇಳಿವೆ.

ಫ್ರಾಂಚೈಸಿಗಳ ವಿರೋಧದಿಂದ ಇದೀಗ ಬಿಸಿಸಿಐ ತನ್ನ ನಿರ್ಧಾರವನ್ನ ಮರುಪರಿಶೀಲಿಸುವ ಸಾಧ್ಯತೆ ಇದೆ. ಲೋಕಸಭಾ ಚುನಾವಣೆ ಹಾಗೂ ವಿಶ್ವಕಪ್ ಟೂರ್ನಿಯಿಂದ ಈ ಬಾರಿಯ ಐಪಿಎಲ್ ಟೂರ್ನಿ ಮಾರ್ಚ್ ಅಂತಿಮ ವಾರದಲ್ಲಿ ಆರಂಭವಾಗಲಿದೆ. ಇನ್ನು ಮೇ 3ನೇ ವಾರ ಅಂತ್ಯಗೊಳ್ಳಲಿದೆ ಎಂದು ಬಿಸಿಸಿಐ ಹೇಳಿದೆ.