ವಿಶ್ವಕಪ್‘ಗಿಂತಲೂ ಹೆಚ್ಚು ಜನಪ್ರಿಯವಾದದ್ದು ಭಾರತದ ಇಂಡಿಯನ್ ಪ್ರೀಮಿಯರ್ ಲೀಗ್. ಐಪಿಎಲ್ ಆಟಗಾರರಿಗೆ ಹಣದ ಹೊಳೆಯನ್ನೇ ಸುರಿಸುವ ಈ ಆಟಕ್ಕೆ ಬೆಂಗಳೂರಿನ ಐಷಾರಾಮಿ ರಿಟ್ಜ್ ಕಾರ್ಲಟನ್ ಹೊಟೇಲ್‌'ನಲ್ಲಿ ನಡೆದ ಬಿಡ್ಡಿಂಗ್'ನಲ್ಲಿ ಒಟ್ಟು 352 ಆಟಗಾರರು ಭಾಗಿಯಾಗಿದ್ದಾರೆ. IPL 10ನೇ ಆವೃತ್ತಿಯ ಹರಾಜು ಪ್ರಕ್ರಿಯೆಯಲ್ಲಿ ಈ ಬಾರಿಯೂ ಕೆಲ ಆಟಗಾರರು ಭಾರೀ ಮೊತ್ತಕ್ಕೆ ಸೇಲ್ ಆಗುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಹಾಗಾದರೆ ಯಾರು ಎಷ್ಟು ಮೊತ್ತಕ್ಕೆ ಸೇಲ್ ಆಗಿದ್ದಾರೆ? ಇಲ್ಲಿದೆ ವಿವರ
ವಿಶ್ವಕಪ್‘ಗಿಂತಲೂ ಹೆಚ್ಚು ಜನಪ್ರಿಯವಾದದ್ದು ಭಾರತದ ಇಂಡಿಯನ್ ಪ್ರೀಮಿಯರ್ ಲೀಗ್. ಐಪಿಎಲ್ ಆಟಗಾರರಿಗೆ ಹಣದ ಹೊಳೆಯನ್ನೇ ಸುರಿಸುವ ಈ ಆಟಕ್ಕೆ ಬೆಂಗಳೂರಿನ ಐಷಾರಾಮಿ ರಿಟ್ಜ್ ಕಾರ್ಲಟನ್ ಹೊಟೇಲ್'ನಲ್ಲಿ ನಡೆದ ಬಿಡ್ಡಿಂಗ್'ನಲ್ಲಿ ಒಟ್ಟು 352 ಆಟಗಾರರು ಭಾಗಿಯಾಗಿದ್ದಾರೆ. IPL 10ನೇ ಆವೃತ್ತಿಯ ಹರಾಜು ಪ್ರಕ್ರಿಯೆಯಲ್ಲಿ ಈ ಬಾರಿಯೂ ಕೆಲ ಆಟಗಾರರು ಭಾರೀ ಮೊತ್ತಕ್ಕೆ ಸೇಲ್ ಆಗುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಹಾಗಾದರೆ ಯಾರು ಎಷ್ಟು ಮೊತ್ತಕ್ಕೆ ಸೇಲ್ ಆಗಿದ್ದಾರೆ? ಇಲ್ಲಿದೆ ವಿವರ
ಆಟಗಾರ | ಖರೀದಿಸಿದ ತಂಡ | ಮೊತ್ತ |
ಬೆನ್ ಸ್ಟೋಕ್ಸ್ | ಪುಣೆ ಸೂಪರ್ ಜೈಂಟ್ಸ್ | 14.50 ಕೋಟಿ ರೂ. |
ತೈಮಲ್ ಮಿಲ್ಸ್ | ರಾಯಲ್ ಚಾಲೆಂಜರ್ಸ್ ಬೆಂಗಳೂರು | 12 ಕೋಟಿ ರೂ. |
ಕಗಿಸೋ ರಬಾಡ | ಡೆಲ್ಲಿ ಡೇರ್ ಡೆವಿಲ್ಸ್ | 5 ಕೋಟಿ ರೂ |
ಟ್ರೆಂಟ್ ಬೋಲ್ಟ್ | ಕೆಕೆಆರ್ | 5 ಕೋಟಿ ರೂ |
ಪ್ಯಾಟ್ ಕಮ್ಮಿನ್ಸ್ | ಡೆಲ್ಲಿ ಡೇರ್ ಡೆವಿಲ್ಸ್ | 4.5 ಕೋಟಿ ರೂ. |
ಕ್ರಿಸ್ ವೋಕ್ಸ್ | ಕೆಕೆಆರ್ | 4.2 ಕೋಟಿ ರೂ |
ರಷೀದ್ ಖಾನ್ | ಸನ್ರೈಸರ್ಸ್ ಹೈದರಾಬಾದ್ | 4 ಕೋಟಿ ರೂ. |
ಟಿ. ನಟರಾಜನ್ | ಕಿಂಗ್ಸ್ ಪಂಜಾಬ್ | 3 ಕೋಟಿ ರೂ. |
ವರೂಣ್ ಅರಾನ್ | ಪಂಜಾಬ್ ಕಿಂಗ್ಸ್ | 2.80 ಕೋಟಿ |
ಇಯಾನ್ ಮಾರ್ಗನ್ | ಪಂಜಾಬ್ ಕಿಂಗ್ಸ್ | 2 ಕೋಟಿ ರೂ. |
ಆ್ಯಂಜೆಲೊ ಮ್ಯಾಥ್ಯೂಸ್ | ಡೆಲ್ಲಿ ಡೇರ್ ಡೆವಿಲ್ಸ್ | 2 ಕೋಟಿ ರೂ. |
ಮಿಚಲ್ ಜಾನ್ಸನ್ | ಮುಂಬೈ ಇಂಡಿಯನ್ಸ್ | 2 ಕೋಟಿ ರೂ. |
ಗೌತಮ್ ಕೆ | ಮುಂಬೈ ಇಂಡಿಯನ್ಸ್ | 2 ಕೋಟಿ ರೂ. |
ಅನಿಕೇತನ್ ಚೌಧರಿ | ರಾಯಲ್ ಚಾಲೆಂಜರ್ಸ್ ಬೆಂಗಳೂರು | 2 ಕೋಟಿ ರೂ. |
ಮುರುಗನ್ ಅಶ್ವಿನ್ | ಡೆಲ್ಲಿ ಡೇರ್ ಡೆವಿಲ್ಸ್ | 1 ಕೋಟಿ ರೂ. |
ಪವನ್ ನೇಗಿ | ರಾಯಲ್ ಚಾಲೆಂಜರ್ಸ್ ಬೆಂಗಳೂರು | 1 ಕೋಟಿ ರೂ. |
ಕೋರೆ ಆಂಡರ್ಸನ್ | ಡೆಲ್ಲಿ ಡೇರ್ ಡೆವಿಲ್ಸ್ | 1 ಕೋಟಿ ರೂ. |
ಏಕಲವ್ಯ ದ್ವಿವೇದಿ | ಸನ್ರೈಸರ್ಸ್ ಹೈದರಾಬಾದ್ | 75 ಲಕ್ಷ ರೂ. |
ನಿಕೋಲಸ್ ಪೂರನ್ | ಮುಂಬೈ ಇಂಡಿಯನ್ಸ್ | 30 ಲಕ್ಷ ರೂ. |
ಮೊಹ್ಮದ್ ನಬಿ | ಸನ್ರೈಸರ್ಸ್ ಹೈದ್ರಾಬಾದ್ | 30 ಲಕ್ಷ ರೂ. |
ರಾಹುಲ್ ತಿವೇಟಿಯ | ಪಂಜಾಬ್ ಕಿಂಗ್ಸ್ | 25 ಲಕ್ಷ ರೂ. |
ಆದಿತ್ಯ ತರೆ | ಡೆಲ್ಲಿ ಡೇರ್ಡೆವಿಲ್ಸ್ | 25 ಲಕ್ಷ ರೂ. |
ಪ್ರವೀಣ್ ತಾಂಬೆ | ಸನ್ರೈಸರ್ಸ್ ಹೈದರಾಬಾದ್ | 10 ಲಕ್ಷ ರೂ. |
ತನ್ಮಯ್ ಅಗರ್ವಾಲ್ | ಸನ್ರೈಸರ್ಸ್ ಹೈದ್ರಾಬಾದ್ | 10 ಲಕ್ಷ ರೂ. |
ಈ ಬಾರಿ ಇಂಗ್ಲೆಂಡ್ನ ಆಟಗಾರ, ಸ್ಟಾರ್ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಐಪಿಎಲ್ ಇತಿಹಾಸದಲ್ಲೇ 2ನೇ ಅತಿದೊಡ್ಡ ಮೊತ್ತಕ್ಕೆ ಹರಾಜು ಆಗಿದ್ದಾರೆ. ಬೆನ್ ಸ್ಟೋಕ್ಸ್ ಅವರನ್ನು ರೈಸಿಂಗ್ ಪುಣೆ ತಂಡ ಬರೋಬ್ಬರಿ 14.50 ಕೋಟಿ ರೂ. ಕೊಟ್ಟು ಖರೀದಿಸಿದೆ. ಈ ಮೂಲಕ 10 ಆವೃತ್ತಿಗಳ ಐಪಿಎಲ್ ಇತಿಹಾಸದಲ್ಲೇ ಬೆನ್ ಸ್ಟೋಕ್ಸ್ 2ನೇ ಅತಿದೊಡ್ಡ ಮೊತ್ತಕ್ಕೆ ಹರಾಜು ಆಗಿದ್ದಾರೆ. ಅಲ್ಲದೇ, ಐಪಿಎಲ್ನಲ್ಲಿ ಅತಿ ಹೆಚ್ಚು ಮೊತ್ತ ಪಡೆದ 2ನೇ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. 2015ರಲ್ಲಿ ಯುವರಾಜ್ ಸಿಂಗ್ ದೆಹಲಿ ತಂಡ 16 ಕೋಟಿ ರೂಪಾಯಿ ಕೊಟ್ಟು ಖರೀದಿಸಿತ್ತು.
