ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದ್ದ ಯುವರಾಜ್ ಸಿಂಗ್ ಅವರನ್ನು ಕೊನೆಗೂ ಮುಂಬೈ ಇಂಡಿಯನ್ಸ್ ತಂಡ ಕೋಟಿ ರುಪಾಯಿ ನೀಡಿ ಖರೀದಿಸುವಲ್ಲಿ ಯಶಸ್ವಿಯಾಗಿದೆ. ಮೊದಲ ಸುತ್ತಿನ ಹರಾಜಿನಲ್ಲಿ ಯಾವೊಬ್ಬ ಫ್ರಾಂಚೈಸಿಯೂ ಯುವಿಯನ್ನು ಖರೀದಿಸುವ ಮನಸು ಮಾಡಿರಲಿಲ್ಲ.
ಬೆಂಗಳೂರು[ಡಿ.19]: ಬಹುನಿರೀಕ್ಷಿತ 12ನೇ ಆವೃತ್ತಿಯ ಐಪಿಎಲ್ ಆಟಗಾರರ ಹರಾಜಿಗೆ ತೆರೆಬಿದ್ದಿದೆ. ಕೆಲವು ಆಟಗಾರರು ಅಚ್ಚರಿಯ ಬೆಲೆಗೆ ಹರಾಜಾಗಿದ್ದರೆ, ಮತ್ತೆ ಕೆಲವರು ಹರಾಜಾಗದೇ ಉಳಿದು ನಿರಾಸೆ ಅನುಭವಿಸಿದ್ದಾರೆ.
ಇನ್ನು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದ್ದ ಯುವರಾಜ್ ಸಿಂಗ್ ಅವರನ್ನು ಕೊನೆಗೂ ಮುಂಬೈ ಇಂಡಿಯನ್ಸ್ ತಂಡ ಕೋಟಿ ರುಪಾಯಿ ನೀಡಿ ಖರೀದಿಸುವಲ್ಲಿ ಯಶಸ್ವಿಯಾಗಿದೆ. ಮೊದಲ ಸುತ್ತಿನ ಹರಾಜಿನಲ್ಲಿ ಯಾವೊಬ್ಬ ಫ್ರಾಂಚೈಸಿಯೂ ಯುವಿಯನ್ನು ಖರೀದಿಸುವ ಮನಸು ಮಾಡಿರಲಿಲ್ಲ. ಬಳಿಕ ಎರಡನೇ ಸುತ್ತಿನ ಹರಾಜಿನಲ್ಲಿ ಮೂಲ ಬೆಲೆಗೆ ಯುವಿಯನ್ನು ಖರೀದಿಸುವಲ್ಲಿ ಮುಂಬೈ ಇಂಡಿಯನ್ಸ್ ಯಶಸ್ವಿಯಾಗಿದೆ. ಟಿ20 ಕ್ರಿಕೆಟ್’ನಲ್ಲಿ ಅಪಾರ ಅನುಭವವಿರುವ ಯುವಿ ಇದೀಗ ಮುಂಬೈ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಕೊನೆಗೂ ಹರಾಜಾದ ಯುವರಾಜ್ ಸಿಂಗ್-ಯಾವ ತಂಡಕ್ಕೆ?
ಸಾಮಾಜಿಕ ಜಾಲತಾಣಗಳಲ್ಲಿ ಮುಂಬೈ ಇಂಡಿಯನ್ಸ್ ಅಭಿಮಾನಿಗಳು ಯುವಿಯನ್ನು ಖರೀದಿಸಿ ಎಂದು ಸಾಕಷ್ಟು ಮನವಿ ಮಾಡಿಕೊಂಡಿದ್ದರು, ಇದೀಗ ಯುವಿ ಮುಂಬೈ ಇಂಡಿಯನ್ಸ್ ತಂಡ ಕೂಡಿಕೊಂಡ ಬೆನ್ನಲ್ಲೇ ಇನ್ಮುಂದೆ ಮಜಾ ಬರಲಿದೆ ಎಂದು ಹೇಳುವ ಮೂಲಕ ಎದುರಾಳಿ ತಂಡಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಯುವಿ ಹೇಳಿದ್ದೇನು..? ನೀವೇ ನೋಡಿ..
ಮುಂಬೈ ಇಂಡಿಯನ್ಸ್ ತಂಡದ ಭಾಗವಾಗಿರುವುದಕ್ಕೆ ಸಂತೋಷವಾಗುತ್ತಿದೆ. ಶೀಘ್ರದಲ್ಲೇ ಒಟ್ಟಿಗೆ ಆಡೋಣ ಎಂದು ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾರಿಗೆ ಸಂದೇಶ ರವಾನಿಸಿದ್ದಾರೆ.
2018ನೇ ಆವೃತ್ತಿಯಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡವನ್ನು ಪ್ರತಿನಿಧಿಸಿದ್ದ ಯುವಿಯನ್ನು ಫ್ರಾಂಚೈಸಿ ರೀಟೈನ್ ಮಾಡಿಕೊಂಡಿರಲಿಲ್ಲ. 2015ರ ಹರಾಜಿನಲ್ಲಿ 16 ಕೋಟಿ ರುಪಾಯಿಗೆ ಹರಾಜಾಗುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದರು.
ಮುಂಬೈ ಇಂಡಿಯನ್ಸ್ ಫುಲ್ ಟೀಂ- ಎಂಟ್ರಿಕೊಟ್ಟ ಯುವಿ, ಮಲಿಂಗ!
ಇನ್ನು 11ನೇ ಆವೃತ್ತಿಯ ಹರಾಜಿನಲ್ಲಿ ಕ್ರಿಸ್ ಗೇಲ್ ಅವರನ್ನು ಮೊದಲ ಸುತ್ತಿನಲ್ಲಿ ಯಾವೊಬ್ಬ ಫ್ರಾಂಚೈಸಿಯೂ ಖರೀದಿಸುವ ಮನಸು ಮಾಡಿರಲಿಲ್ಲ. ಆದರೆ ಎರಡನೇ ಸುತ್ತಿನಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ಮೂಲಬೆಲೆಗೆ ಗೇಲ್ ಅವರನ್ನು ಖರೀದಿಸಿತ್ತು. ಪಂಜಾಬ್ ತಂಡ ಕೂಡಿಕೊಂಡ ಬೆನ್ನಲ್ಲೇ ಗೇಲ್ ತೊಡೆತಟ್ಟಿ ಮೀಸೆ ತಿರುವಿ ವಾರ್ನಿಂಗ್ ಮಾಡಿದ್ದರು. ಅದರಂತೆ 12ನೇ ಆವೃತ್ತಿಯಲ್ಲಿ ಒಂದು ಶತಕ ಹಾಗೂ ಮೂರು ಅರ್ಧಶತಕ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.

