ಚೆನ್ನೈ(ಡಿ.11): ಐಪಿಎಲ್ ಹರಾಜಿಗೆ 8 ಫ್ರಾಂಚೈಸಿಗಳು ರೆಡಿಯಾಗಿವೆ. ಇದೇ 18 ರಂದು ಜೈಪುರದಲ್ಲಿ ಹರಾಜು ನಡೆಯಲಿದೆ. ಈಗಾಗಲೇ ತಂಡಗಳು ಯಾರನ್ನ ಖರೀದಿಸಬೇಕು ಅನ್ನೋದನ್ನ ಪಟ್ಟಿ ಮಾಡಿಕೊಂಡಿದೆ. ಇದೀಗ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಪ್ರಮುಖವಾಗಿ ಮೂವರ ಆಟಗಾರರ ಮೇಲೆ ಕಣ್ಣಿಟ್ಟಿದೆ.

ಇದನ್ನೂ ಓದಿ: ಪರ್ತ್ ಟೆಸ್ಟ್’ಗೆ ಪೃಥ್ವಿ ಎಂಟ್ರಿ: ಯಾರಿಗೆ ರೆಸ್ಟ್..?

ನಾಯಕ ಎಂ.ಎಸ್.ಧೋನಿ ಸಲಹೆ ಪಡೆದಿರುವ ಸಿಎಸ್‌ಕೆ ಫ್ರಾಂಚೈಸಿ ಇದೀಗ ಮೂವರನ್ನ ಖರೀದಿಸಲು ಮುಂದಾಗಿದೆ. ಇದಕ್ಕಾಗಿ ಎಲ್ಲಾ ತಯಾರಿ ಮಾಡಿಕೊಂಡಿದೆ.  ನಾಯಕ ಧೋನಿ ಪದೇ ಪದೇ ತಂಡ ಬದಲಿಸುವ ನಾಯಕರಲ್ಲ. ಕಾಂಬಿನೇಶನ್ ಕುರಿತು ಸ್ಪಷ್ಟ ಅರಿವಿರುವ ಧೋನಿ ಇದೀಗ ಉಪಯುಕ್ತ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಛೀ..ರವಿಶಾಸ್ತ್ರಿಗಳ ಬಾಯಲ್ಲಿ ಎಂಥಾ ಅಶ್ಲೀಲ ಮಾತು...ವಿಡಿಯೋ ವೈರಲ್

ಅಲೆಕ್ಸ್ ಹೇಲ್ಸ್
ಇಂಗ್ಲೆಂಡ್ ತಂಡಕ್ಕೆ ಹೊಸ ಹುರುಪು ನೀಡಿರುವ ಅಲೆಕ್ಸ್ ಹೇಲ್ಸ್ ಮೇಲೆ ಸಿಎಸ್‌ಕೆ ಚಿತ್ತ ನೆಟ್ಟಿದೆ. ಸಿಎಸ್‌ಕೆ ತಂಡದಲ್ಲಿರುವ ಶೇನ್ ವ್ಯಾಟ್ಸ್‌ನ್ ಕಳೆದ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಇದೀಗ 37 ವರ್ಷದ ವ್ಯಾಟ್ಸ್‌ನ್ ಸತತ ಪಂದ್ಯ ಆಡುವುದು ಕಷ್ಟವಾಗಲಿದೆ. ಹೀಗಾಗಿ ಅಲೆಕ್ಸ್ ಹೇಲ್ಸ್‌ ಖರೀದಿಸಿ ಅವಕಾಶ ನೀಡಲು ಸಿಎಸ್‌ಕೆ ಪ್ಲಾನ್ ಹಾಕಿಕೊಂಡಿದೆ.

ಸ್ಯಾಮ್ ಕುರ್ರನ್
ಇತ್ತೀಚೆಗಿನ ಭಾರತ ಪ್ರವಾಸದಲ್ಲಿ ಅತ್ಯುತ್ತಮ ಆಲ್ರೌಂಡರ್ ಪ್ರದರ್ಶನ ನೀಡಿದ ಇಂಗ್ಲೆಂಡ್ ಕ್ರಿಕೆಟಿಗ ಸ್ಯಾಮ್ ಕುರ್ರನ್ ಖರೀದಿಸಲು ಧೋನಿ ಸಲಹೆ ನೀಡಿದ್ದಾರೆ. ತಂಡದ ಹಿರಿಯ ಆಲ್ರೌಂಡರ್ ಡ್ವೇನ್ ಬ್ರಾವೋಗೆ ಬ್ಯಾಕ್ ಅಪ್ ಕ್ರಿಕೆಟಿಗನಾಗಿ  ಸ್ಯಾಮ್ ಕುರ್ರನ್‌ಗೆ ಅವಕಾಶ ನೀಡೋ ಸಾಧ್ಯತೆ ಹೆಚ್ಚಿದೆ.

ಹೆನ್ರಿಚ್ ಕ್ಲಾಸೆನ್
ಸೌತ್ಆಫ್ರಿಕಾ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಹೆನ್ರಿಚ್ ಕ್ಲಾಸೆನ್ ಖರೀದಿಸಲು ಪ್ಲಾನ್ ರೆಡಿ ಮಾಡಿದೆ. ಸಿಎಸ್‌ಕೆ ತಂಡದ ನಾಯಕ ಹಾಗೂ ವಿಕೆಟ್ ಕೀಪರ್ ಜವಾಬ್ದಾರಿ ಧೋನಿ ಮೇಲಿದೆ. ಆದರೆ ಬ್ಯಾಕ್‌ಅಪ್ ವಿಕೆಟ್ ಕೀಪರ್ ಆಗಿ ಹೆನ್ರಿಚ್ ಉತ್ತಮ ಆಯ್ಕೆ. ಹೀಗಾಗಿ ಸಿಎಸ್‌ಕೆ ಹೆನ್ರಿಚ್ ಖರೀದಿಗೆ ಮುಂದಾಗಲಿದೆ.