ಅಡಿಲೇಡ್[ಡಿ.11]: ಭಾರತದ ಆರಂಭಿಕ ಹಾಗೂ ಯುವ ಆಟಗಾರ ಪೃಥ್ವಿ ಶಾ, ನೋವಿನಿಂದ ಶೀಘ್ರವಾಗಿ ಚೇತರಿಸಿಕೊಳ್ಳುತ್ತಿದ್ದು ಶುಕ್ರವಾರದಿಂದ ಆರಂಭವಾಗಲಿರುವ 2ನೇ ಟೆಸ್ಟ್‌ಗೆ ಮರಳುವ ಸಾಧ್ಯತೆಗಳಿವೆ. 

ಆಸ್ಟ್ರೇಲಿಯಾ ಇಲೆವೆನ್ ವಿರುದ್ಧದ ಅಭ್ಯಾಸ ಪಂದ್ಯದ ವೇಳೆ ಕ್ಯಾಚ್ ಹಿಡಿಯುವ ವೇಳೆ ಪಾದದ ಗಾಯಕ್ಕೆ ತುತ್ತಾಗಿದ್ದರು. ಪೃಥ್ವಿ, ತಮ್ಮ ಫಿಟ್ನೆಸ್ ಹೆಚ್ಚಿಸಿಕೊಳ್ಳಲು ಸೋಮವಾರ ತಮ್ಮ ಎಡಗಾಲಿನ ಪಾದಕ್ಕೆ ಪಟ್ಟಿ ಕಟ್ಟಿಕೊಂಡು ಓಡುವ ಅಭ್ಯಾಸ ನಡೆಸಿದರು. ಒಂದು ವೇಳೆ ಪೂರ್ಣ ಚೇತರಿಸಿಕೊಳ್ಳದೇ ಪರ್ತ್ ಟೆಸ್ಟ್‌ಗೆ ಮರಳಲು ಸಾಧ್ಯವಾಗದಿದ್ದರೆ, ಮೆಲ್ಬರ್ನ್ ಟೆಸ್ಟ್‌ನಲ್ಲಿ ಆಡುವ ಸಾಧ್ಯತೆ ಹೆಚ್ಚಿದೆ.

ಭಾರತಕ್ಕೆ ಆಘಾತ: ಮೊದಲ ಟೆಸ್ಟ್’ನಿಂದ ಸ್ಟಾರ್ ಆಟಗಾರ ಔಟ್

ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಪರ ಪದಾರ್ಪಣೆ ಮಾಡಿದ್ದ ಪೃಥ್ವಿ, ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿ ಗಮನ ಸೆಳೆದಿದ್ದರು. ಅಲ್ಲದೇ ಸರಣಿ ಶ್ರೇಷ್ಠ ಗೌರವಕ್ಕೂ ಭಾಜನರಾಗಿದ್ದರು. ಪೃಥ್ವಿ ಅನುಪಸ್ಥಿತಿಯಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದ ಮರುಳಿ ವಿಜಯ್-ಕೆ.ಎಲ್ ರಾಹುಲ್ ನಿರೀಕ್ಷಿತ ಪ್ರದರ್ಶನ ತೋರಲು ವಿಫಲವಾಗಿದ್ದರು. ವಿಜಯ್ 11&18 ರನ್ ಬಾರಿಸಿದ್ದರೆ, ರಾಹುಲ್ 02&44 ರನ್ ಬಾರಿಸಿದ್ದರು. ಇದೀಗ ಪೃಥ್ವಿ ಆಗಮನ ಯಾರ ಸ್ಥಾನಕ್ಕೆ ಕುತ್ತು ಬರಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

ವಿಂಡೀಸ್ ವಿರುದ್ಧ ಅಬ್ಬರಿಸಿದರೆ ದಿಗ್ಗಜ ಕ್ರಿಕೆಟಿಗರಾಗ್ತಾರ