ಹರಾಜಿನಲ್ಲಿ ಒಟ್ಟು 357 ಆಟಗಾರು ಲಭ್ಯವಿದ್ದು, ಈ ಪೈಕಿ 122 ಮಂದಿ ವಿದೇಶಿ ಕ್ರಿಕೆಟಿಗರು. ಇಂಗ್ಲೆಂಡ್‌ನಿಂದ 8 ಸ್ಟಾರ್ ಆಟಗಾರರು ಖರೀದಿಗೆ ಲಭ್ಯವಿದ್ದಾರೆ.
ಬೆಂಗಳೂರು(ಫೆ.19) ಪ್ರತಿಷ್ಠಿತ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟಿ20 ಪಂದ್ಯಾವಳಿಯ 10ನೇ ಆವೃತ್ತಿಗೆ ಆಟಗಾರರ ಹರಾಜು ಪ್ರಕ್ರಿಯೆಗೆ ಕ್ಷಣಗಣನೆ ಆರಂಭವಾಗಿದೆ. ನಗರದ ಐಷಾರಾಮಿ ರಿಟ್ಜ್ ಕಾರ್ಲಟನ್ ಹೊಟೇಲ್'ನಲ್ಲಿ ಸೋಮವಾರ ಬೆಳಗ್ಗಿನಿಂದ ಹರಾಜು ನಡೆಯಲಿದೆ. ಐಪಿಎಲ್ನ ಎಲ್ಲಾ ಎಂಟು ತಂಡಗಳ ಮಾಲೀಕರು ತಮಗೆ ಬೇಕಾದ ಆಟಗಾರರನ್ನು ಖರೀದಿಸಲು ಅಣಿಯಾಗಿದ್ದಾರೆ. ತಮ್ಮ ತಂಡದ ಅವಶ್ಯಕತೆಗೆ ತಕ್ಕಂತೆ ಆಟಗಾರರ ಖರೀದಿಗೆ ಪ್ರತಿ ತಂಡಗಳೂ ಈಗಾಗಲೇ ಯೋಜನೆ ರೂಪಿಸಿಕೊಂಡಿವೆ.
ಹರಾಜಿನಲ್ಲಿ ಒಟ್ಟು 357 ಆಟಗಾರು ಲಭ್ಯವಿದ್ದು, ಈ ಪೈಕಿ 122 ಮಂದಿ ವಿದೇಶಿ ಕ್ರಿಕೆಟಿಗರು. ಇಂಗ್ಲೆಂಡ್ನಿಂದ 8 ಸ್ಟಾರ್ ಆಟಗಾರರು ಖರೀದಿಗೆ ಲಭ್ಯವಿದ್ದಾರೆ. ಬೆನ್ ಸ್ಟೋಕ್ಸ್, ಕ್ರಿಸ್ ಜೋರ್ಡನ್, ಇಯಾನ್ ಮಾರ್ಗನ್ , ಅಲೆಕ್ಸ್ ಹೇಲ್ಸ್, ಜಾನಿ ಬೇರ್ಸ್ಟೋ, ಜಾಸನ್ ರಾಯ್ ಮತ್ತು ತೈಮಲ್ ಮಿಲ್ಸ್ ಅವರುಗಳಿಗೆ ವಿವಿಧ ತಂಡಗಳು ಮುಗಿಬೀಳುವ ಸಾಧ್ಯತೆ ಇದೆ.
ಇದೇ ಮೊದಲ ಬಾರಿಗೆ ಆಫ್ಘಾನಿಸ್ತಾನ ತಂಡದ ಐವರು ಮತ್ತು ಯುಎಇ ತಂಡದ ಒಬ್ಬ ಆಟಗಾರ ಹರಾಜಿನಲ್ಲಿ ಭಾಗಿಯಾಗಲಿದ್ದಾರೆ.
ಪಟ್ಟಿಯಲ್ಲಿರುವವರ ಭಾರತೀಯರ ಪೈಕಿ 23 ಆಟಗಾರರು ರಾಷ್ಟ್ರೀಯ ತಂಡದಲ್ಲಿ ಆಡಿರುವ ಅನುಭವ ಹೊಂದಿದ್ದಾರೆ. ಇದರಲ್ಲಿ ಚೇತೇಶ್ವರ ಪೂಜಾರ, ಮನ್ಪ್ರೀತ್ ಗೋಣಿ, ಮುನಾಫ್ ಪಟೇಲ್, ಸುಬ್ರಮಣಿಯನ್ ಬದ್ರೀನಾಥ್, ಪ್ರಗ್ಯಾನ್ ಓಜಾ ಪ್ರಮುಖರು.
ಕರ್ನಾಟಕದ 12 ಆಟಗಾರರು
ಕೃಷ್ಣಪ್ಪ ಗೌತಮ್ (ರಣಜಿ ಆಟಗಾರ)
ಶಿಶಿರ್ ಭವಾನೆ (ರಣಜಿ ಆಟಗಾರ)
ಸಮರ್ಥ ಆರ್ (ರಣಜಿ ಆಟಗಾರ)
ಸಿ.ಎಂ. ಗೌತಮ್ (ರಣಜಿ ಆಟಗಾರ)
ಪವನ್ ದೇಶಪಾಂಡೆ (ರಣಜಿ ಆಟಗಾರ)
ರೋನಿತ್ ಮೊರೆ (ರಣಜಿ ಆಟಗಾರ)
ಪ್ರಸಿಧ್ ಕೃಷ್ಣ (ರಣಜಿ ಆಟಗಾರ)
ಪ್ರವೀಣ್ ದುಬೆ
ಕಿಶೋರ್ ಕಾಮತ್
ಅನಿರುದ್ಧ ಜೋಶಿ
ಪ್ರದೀಪ್ ಟಿ.
ವೈಶಾಕ್ ವಿ.
ಟಾಪ್-10 ಆಲ್ರೌಂಡರ್'ಗಳು
ಕಾಲಿನ್ ಡಿ ಗ್ರಾಂಡ್'ಹೋಮ್ (ನ್ಯೂಜಿಲೆಂಡ್)
ಬೆನ್ ಸ್ಟೋಕ್ಸ್ (ಇಂಗ್ಲೆಂಡ್)
ಮೊಹ್ಮದ್ ನಬಿ (ಆಫ್ಘಾನಿಸ್ತಾನ)
ತೈಮಲ್ ಮಿಲ್ಸ್ (ಇಂಗ್ಲೆಂಡ್)
ಕ್ರಿಸ್ ವೋಕ್ಸ್ (ಇಂಗ್ಲೆಂಡ್)
ತಿಸ್ಸಾರ ಪೆರೇರಾ (ಶ್ರೀಲಂಕಾ)
ಡ್ವೇನ್ ಪ್ರೆಟೋರಿಯಸ್ (ದ.ಆಫ್ರಿಕಾ)
ಆ್ಯಂಡಿಲಿ ಫೆಹಲ್ಕವಾಯೊ (ದ.ಆಫ್ರಿಕಾ)
ಅಭಿಷೇಕ್ ನಾಯರ್ (ಭಾರತ)
ಮಿಚೆಲ್ ಸ್ಯಾಂಟ್ನರ್ (ನ್ಯೂಜಿಲೆಂಡ್)
ಟಾಪ್-10 ಬೌಲರುಗಳು
ಕೆಸರಿಕ್ ವಿಲಿಯಮ್ಸ್ (ವೆಸ್ಟ್ ಇಂಡೀಸ್)
ಕಗಿಸೊ ರಬಾಡ (ದ.ಆಫ್ರಿಕಾ)
ಇಶಾಂತ್ ಶರ್ಮ (ಭಾರತ)
ಜೇರೊಮ್ ಟೇಲರ್ (ವೆಸ್ಟ್ ಇಂಡೀಸ್)
ಟಸ್ಕಿನ್ ಅಹ್ಮದ್ (ಬಾಂಗ್ಲಾದೇಶ)
ಲೂಕಿ ಫರ್ಗ್ಯೂಸನ್ (ನ್ಯೂಜಿಲೆಂಡ್)
ಜಯದೇವ್ ಉನದ್ಕತ್ (ಭಾರತ)
ರುದ್ರ ಪ್ರತಾಪ್ ಸಿಂಗ್ (ಭಾರತ)
ಪಂಕಜ್ ಸಿಂಗ್ (ಭಾರತ)
ಬಿಲ್ಲಿ ಸ್ಟಾನ್ಲೇಕ್ (ಆಸ್ಟ್ರೇಲಿಯಾ)
ಸ್ಪಿನ್ನರ್'ಗಳು
ಇಮ್ರಾನ್ ತಾಹೀರ್ (ದ.ಆಫ್ರಿಕಾ)
ನಥಾನ್ ಲಿಯಾನ್ (ಆಸ್ಟ್ರೇಲಿಯಾ)
ಸಿಕುಗೆ ಪ್ರಸನ್ನ (ಶ್ರೀಲಂಕಾ)
ಮುರುಗನ್ ಅಶ್ವಿನ್ (ಭಾರತ)
ಪ್ರವೀಣ್ ತಾಂಬೆ (ಭಾರತ)
ಪ್ರಗ್ಯಾನ್ ಓಜಾ (ಭಾರತ)
ಬ್ಯಾಟ್ಸ್ಮನ್
ನಿಕೋಲಸ್ ಪೂರನ್ (ವೆಸ್ಟ್ ಇಂಡೀಸ್)
ಇವಿನ್ ಲೆವೀಸ್ (ವೆಸ್ಟ್ ಇಂಡೀಸ್)
ಜಾಸನ್ ರಾಯ್ (ಇಂಗ್ಲೆಂಡ್)
ಮಾರ್ಟಿನ್ ಗುಪ್ಟಿಲ್ (ನ್ಯೂಜಿಲೆಂಡ್)
ಅಲೆಕ್ಸ್ ಹೇಲ್ಸ್ (ಇಂಗ್ಲೆಂಡ್)
ಅಭಿನವ್ ಮುಕುಂದ್ (ಭಾರತ)
ಆದಿತ್ಯ ತಾರೆ (ಭಾರತ)
