ಐಪಿಎಲ್‌ನಲ್ಲಿ ಭಾರತೀಯರು ಕೇವಲ ಸಹಾಯಕ, ಬೌಲಿಂಗ್ ಇಲ್ಲವೇ ಫೀಲ್ಡಿಂಗ್ ಕೋಚ್ ಆಗಷ್ಟೇ ಕಾರ್ಯ ನಿರ್ವಹಿಸಲಿರುವುದು ಭಾರೀ ಅಸಮಾಧಾನಕ್ಕೆ ಕಾರಣವಾಗಿದೆ.

ಮೊಹಾಲಿ(ಮಾ.05): ಹೆಸರಿಗೆ ಇಂಡಿಯನ್ ಪ್ರೀಮಿಯರ್ ಲೀಗ್, ಆದರೆ ವಿದೇಶಿಗರಿಗೇ ಮನ್ನಣೆ. ಐಪಿಎಲ್ 11ನೇ ಆವೃತ್ತಿಯಲ್ಲಿ ಎಲ್ಲಾ 8 ತಂಡಗಳಿಗೂ ವಿದೇಶಿಗರೇ ಕೋಚ್. ಭಾರತದ ಮಾಜಿ ಬ್ಯಾಟ್ಸ್‌'ಮನ್ ವೀರೇಂದ್ರ ಸೆಹ್ವಾಗ್‌'ರನ್ನು ಮೆಂಟರ್ ಆಗಿ ಹೊಂದಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಭಾನುವಾರ ತನ್ನ ಪ್ರಧಾನ ಕೋಚ್ ಆಗಿ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಬ್ರಾಡ್ ಹಾಡ್ಜ್‌'ರನ್ನು ನೇಮಿಸಿತು. ತಂಡ ತನ್ನ ಪ್ರಧಾನ ಕೋಚ್ ಆಗಿ ಸೆಹ್ವಾಗ್‌'ರನ್ನೇ ನೇಮಿಸಬಹುದು ಎನ್ನುವ ನಿರೀಕ್ಷೆ ಇತ್ತು. ಆದರೆ ಅದು ಹುಸಿಯಾಗಿದೆ.

ಐಪಿಎಲ್‌ನಲ್ಲಿ ಭಾರತೀಯರು ಕೇವಲ ಸಹಾಯಕ, ಬೌಲಿಂಗ್ ಇಲ್ಲವೇ ಫೀಲ್ಡಿಂಗ್ ಕೋಚ್ ಆಗಷ್ಟೇ ಕಾರ್ಯ ನಿರ್ವಹಿಸಲಿರುವುದು ಭಾರೀ ಅಸಮಾಧಾನಕ್ಕೆ ಕಾರಣವಾಗಿದೆ.

ಧ್ವನಿ ಎತ್ತಿದ್ದ ಕೋಚ್ ಸನತ್: ಕೆಲ ದಿನಗಳ ಹಿಂದಷ್ಟೇ ಭಾರತೀಯ ದೇಸಿ ಕ್ರಿಕೆಟ್‌'ನ ಅತ್ಯುತ್ತಮ ಕೋಚ್‌'ಗಳಲ್ಲಿ ಒಬ್ಬರಾದ ಕರ್ನಾಟಕದ ಸನತ್ ಕುಮಾರ್, ಐಪಿಎಲ್ ತಂಡಗಳ ವಿದೇಶಿ ಕೋಚ್ ವ್ಯಾಮೋಹದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಬಿಗ್‌ಬ್ಯಾಶ್, ಕೆರಿಬಿಯನ್ ಲೀಗ್, ಇಂಗ್ಲೆಂಡ್‌'ನ ಟಿ2೦ ಬ್ಲಾಸ್ಟ್ ಟೂರ್ನಿಗಳಲ್ಲಿ ಸ್ಥಳೀಯ ಕೋಚ್‌'ಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂದಿದ್ದರು.