Asianet Suvarna News Asianet Suvarna News

IPL 2021: ಅಬ್ಬರಿಸಿದರೂ ಸಿಗಲಿಲ್ಲ ಗೆಲುವು, ಧೋನಿ ಮುಂದೆ ಶರಣಾದ ಕೊಹ್ಲಿ ಬಾಯ್ಸ್!

  • ಸತತ 2ನೇ ಸೋಲು ಕಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು
  • ಚೆನ್ನೈ ವಿರುದ್ಧ ಮುಗ್ಗರಿಸಿದ ಕೊಹ್ಲಿ ಪಡೆ
  • ಧೋನಿ ಸೈನ್ಯಕ್ಕೆ 6 ವಿಕೆಟ್ ಗೆಲುವು, ಅಂಕಪಟ್ಟಿಯಲ್ಲಿ ಮೊದಲ ಸ್ಥಾನ
IPL 2021 CSK  beat Royal Challengers Bengaluru by 6 wickets in Sharjah ckm
Author
Bengaluru, First Published Sep 24, 2021, 11:18 PM IST

ಶಾರ್ಜಾ(ಸೆ.24): IPL 2021 ಟೂರ್ನಿಯ ಎರಡನೇ ಭಾಗ ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bengaluru) ತಂಡಕ್ಕೆ ನಿರೀಕ್ಷಿತ ಮಟ್ಟದ ಯಶಸ್ಸು ತಂದುಕೊಡುತ್ತಿಲ್ಲ. ಕೆಕೆಆರ್(KKR) ವಿರುದ್ಧದ ಪಂದ್ಯದಲ್ಲಿ ಮುಗ್ಗರಿಸಿದ್ದ ಆರ್‌ಸಿಬಿ ಇದೀಗ ಚೆನ್ನೈ ಸೂಪರ್ ಕಿಂಗ್ಸ್(Chennai super Kings) ವಿರುದ್ಧವೂ ಸೋಲು ಅನುಭವಿಸಿದೆ. ಈ ಮೂಲಕ ಆರ್‌ಸಿಬಿ ತಂಡದ ಸೋಲಿನ ಸರಣಿ ಮುಂದುವರಿದಿದೆ.

ಅಥಿಯಾ ಶೆಟ್ಟಿ- ಸಾರಾ ತೆಂಡುಲ್ಕರ್ : ಕ್ರಿಕೆಟ್ ಸ್ಟಾರ್ಸ್‌ನ ಗರ್ಲ್‌ಫ್ರೆಂಡ್ಸ್‌!

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಾಯಕ ವಿರಾಟ್ ಕೊಹ್ಲಿ(Virat Kohli) ಹಾಗೂ ದೇವದತ್ ಪಡಿಕ್ಕಲ್(Devdutt Padikkal) ಅಬ್ಬರ ನೋಡಿದಾಗ ಇಂದು ಆರ್‌ಸಿಬಿ ಗೆಲುವು ಪಕ್ಕಾ ಎಂದು ಭಾವಿಸಲಾಗಿತ್ತು. ಆದರೆ ಆರಂಭಿಕರ ವಿಕೆಟ್ ಪತನಗೊಂಡ ಬಳಿಕ ಕೊಹ್ಲಿ ಸೈನ್ಯದ ಬ್ಯಾಟಿಂಗ್ ದಿಢೀರ್ ಕುಸಿತ ಕಂಡಿದ್ದು ಮಾತ್ರವಲ್ಲ, ಉತ್ತಮ ಟಾರ್ಗೆಟ್(Target) ನೀಡಲು ವಿಫಲವಾಯಿತು. ಚೆನ್ನೈ ಸೂಪರ್ ಕಿಂಗ್ಸ್ ಫಾರ್ಮ್ ಮುಂದೆ ಆರ್‌ಸಿಬಿ(RCB) ನೀಡಿದ ಗುರಿ ಸಣ್ಣದಾಯಿತು. ಹೀಗಾಗಿ  ಸಿಎಸ್‌ಕೆ (CSK) ನಿರಾಯಾಸವಾಗಿ ಗುರಿ ತಲುಪಿತು. ಈ ಮೂಲಕ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಅಲಂಕರಿಸಿತು.

ಉತ್ತಮ ಫಾರ್ಮ್‌ನಲ್ಲಿರು ರುತುರಾಜ್ ಗಾಯಕ್ವಾಡ್, ಆರ್‌ಸಿಬಿ ವಿರುದ್ಧವೂ ಅದೇ ಬ್ಯಾಟಿಂಗ್ ಪ್ರದರ್ಶನ ಮುಂದುವರಿಸಿದರು. ರುತುರಾಜ್‌ಗೆ ಫಾಫ್ ಡುಪ್ಲೆಸಿಸ್ ಉತ್ತಮ ಸಾಥ್ ನೀಡಿದರು. ಇವರಿಬ್ಬರ ಜೊತೆಯಾಟ ಆರ್‌ಸಿಬಿ ತಂಡ ಅರ್ಧ ಆತ್ಮವಿಶ್ವಾಸವನ್ನೇ ಕಸಿಯಿತು. 

IPL 2021: ಹಾರ್ದಿಕ್‌ ಪಾಂಡ್ಯ ಮುಂಬೈ ಇಂಡಿಯನ್ಸ್‌ ಪರ ಕಣಕ್ಕಿಳಿಯೋದು ಯಾವಾಗ

ಯಜುವೇಂದ್ರ ಚಹಾಲ್ ನಿರಾಸೆಗೊಂಡಿಡ್ಡ ಆರ್‌ಸಿಬಿ ತಂಡಕ್ಕೆ ಬೂಸ್ಟ್ ನೀಡಿದರು. 38 ರನ್ ಸಿಡಿಸಿ ಮುನ್ನಗ್ಗುತ್ತಿದ್ದ ರುತರಾಜ್ ವಿಕೆಟ್ ಕಬಳಿಸಿದರು. ಇದರ ಬೆನ್ನಲ್ಲೇ ಫಾಪ್ ಡುಪ್ಲೆಸಿಸ್ 31 ರನ್ ಸಿಡಿಸಿ ಔಟಾದರು. 71 ರನ್‌ಗೆ 2 ವಿಕೆಟ್ ಕಳೆದುಕೊಂಡ ಚೆನ್ನೈ ಸೂಪರ್ ಕಿಂಗ್ಸ್ ಒತ್ತಡಕ್ಕೆ ಸಿಲುಕಿತು. ಆದರೆ ಮೊಯಿನ್ ಆಲಿ ಹಾಗೂ ಅಂಬಾಟಿ ರಾಯುಡು ಜೊತೆಯಾಟ ಚೆನ್ನೈ ಆತಂಕ ದೂರ ಮಾಡಿತು. ಇತ್ತ ಕೊಹ್ಲಿ ಸೈನ್ಯದ ಸಂಕಷ್ಟ ಹೆಚ್ಚಾಯಿತು.

ಮೊಯಿನ್ ಆಲಿ 23 ರನ್ ಸಿಡಿಸಿ ಔಟಾದರೂ, ಚೆನ್ನೈ ಗಾಬರಿ ಪಡಲಿಲ್ಲ. ಕಾರಣ ಚೆನ್ನೈ ಗೆಲುವಿಗೆ ಅಂತಿಮ 30 ಎಸೆತದಲ್ಲಿ 32 ರನ್ ಅವಶ್ಯಕತೆ ಇತ್ತು. ಜೊತೆಗೆ 7 ವಿಕೆಟ್ ಕೈಯಲ್ಲಿತ್ತು. 32 ರನ್ ಸಿಡಿಸಿ ಭರವಸೆ ಮೂಡಿಸಿದ್ದ ಅಂಬಾಟಿ ರಾಯುಜು, ಹರ್ಷಲ್ ಪಟೇಲ್‌ಗೆ ವಿಕೆಟ್ ಒಪ್ಪಿಸಿದರು. ಚೆನ್ನೈ ತಂಡ 4ನೇ ವಿಕೆಟ್ ಕಳೆದುಕೊಂಡಿತು.

ವಿರಾಟ್-ಅನುಷ್ಕಾ ಮಧ್ಯೆ ಎಲ್ಲವೂ ಸರಿಯಾಗಿದೆಯಾ? ಮಗಳೊಂದಿಗೆ ಮುಂಬೈಗೆ ಮರಳಿದ ನಟಿ!

ಸಿಎಸ್‌ಕೆ ಜವಾಬ್ದಾರಿ ಸುರೇಶ್ ರೈನಾ ಹಾಗೂ ನಾಯಕ ಎಂ.ಎಸ್.ಧೋನಿ(MS Dhoni) ಹೆಗಲ ಮೇಲೆ ಬಿತ್ತು. ಚೆನ್ನೈ ಗೆಲುವಿಗೆ ಅಂತಿಮ 24 ಎಸೆತದಲ್ಲಿ 23 ರನ್ ಅವಶ್ಯಕತೆ ಇತ್ತು. ಧೋನಿ ಹಾಗೂ ರೈನಾ ಜೊತೆಯಾಟದಿಂದ ಚೆನ್ನೈ ಸೂಪರ್ ಕಿಂಗ್ಸ್ ಗೆಲುವು ಖಚಿತಗೊಂಡಿತು. ಸಿಎಸ್‌ಕೆ 18.1 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿತು.  ಸುರೇಶ್ ರೈನಾ ಅಜೇಯ 17 ಹಾಗೂ ಧೋನಿ ಅಜೇಯ 11 ರನ್ ಸಿಡಿಸಿದರು.

ಆರ್‌ಸಿಬಿ ಗೆಲುವಿಗಾಗಿ ಕಠಿಣ ಹೋರಾಟ ನಡೆಸಿತು. ಆದರೆ ಸೋಲು ತಪ್ಪಿಸಲು ಸಾಧ್ಯವಾಗಲಿಲ್ಲ. ಶಾರ್ಜಾ(Sharjah) ಬ್ಯಾಟಿಂಗ್ ಪಿಚ್‌ನಲ್ಲಿ ಬೃಹತ್ ಮೊತ್ತ ಪೇರಿಸಲು ವಿಫಲವಾದ ಆರ್‌ಸಿಬಿ ದುಬಾರಿ ಬೆಲೆ ತೆರಬೇಕಾಯಿತು. ಇದೀಗ ಪ್ಲೇ ಆಫ್ ಹಾದಿ ಕೂಡ ಕಠಿಣವಾಗತೊಡಗಿದೆ.

ಅಂಕಪಟ್ಟಿ:
ಆರ್‌ಸಿಬಿ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯದ ಬಳಿಕ ಐಪಿಎಲ್ 2021ರ ಅಂಕಪಟ್ಟಿಯಲ್ಲಿ(Points Table) ಮಹತ್ವದ ಬದಲಾವಣೆ ಆಗಿದೆ. ಎರಡನೇ ಸ್ಥಾನದಲ್ಲಿದ್ದ ಚೆನ್ನೈ ಸೂಪರ್ ಕಿಂಗ್ಸ್ ಮೊದಲ ಸ್ಥಾನಕ್ಕೇರಿದೆ. ಮೊದಲ ಸ್ಥಾನದಲ್ಲಿದ್ದ ಡೆಲ್ಲಿ ಕ್ಯಾಪಿಟಲ್ಸ್ 2ನೇ ಸ್ಥಾನಕ್ಕೆ ಕುಸಿದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೂರನೇ ಸ್ಥಾನದಲ್ಲಿದೆ. ಆದರೆ ಆರ್‌ಸಿಬಿ ಸೋಲಿನ ಸಂಖ್ಯೆ 4ಕ್ಕೆ ಏರಿಕೆಯಾಗಿದೆ.

Follow Us:
Download App:
  • android
  • ios