ಬೆಂಗಳೂರು(ಆ.23): 2020ರ ಐಪಿಎಲ್ ಟೂರ್ನಿಗೆ  ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈಗಲೇ ತಯಾರಿ ಆರಂಭಿಸಿದೆ. ಇದೀಗ ತಂಡಕ್ಕೆ ನೂತನ ಕೋಚ್ ಹಾಗೂ ಡೈರೆಕ್ಟರ್ ನೇಮಕ ಮಾಡಿದೆ. ಟೀಂ ಇಂಡಿಯಾ ಕೋಚ್ ಹುದ್ದೇ ರೇಸ್‌ನಲ್ಲಿ ನ್ಯೂಜಿಲೆಂಡ್ ಮಾಜಿ ಕ್ರಿಕೆಟಿಗ ಹಾಗೂ ಕೋಚ್ ಮೈಕ್ ಹೆಸನ್ RCB ಡೈರೆಕ್ಟರ್ ಆಗಿ ನೇಮಗೊಂಡಿದ್ದಾರೆ. ಇನ್ನು ತಂಡದ ಕೋಚ್ ಆಗಿ ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಸೈಮನ್ ಕ್ಯಾಟಿಚ್ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ: ಎಲ್ಲಾ ಮಾದರಿಯ ಕ್ರಿಕೆಟ್’ಗೆ ವಿದಾಯ ಹೇಳಿದ RCB ಮಾಜಿ ಕ್ರಿಕೆಟಿಗ..!

ಮೈಕ್ ಹೆಸನ್‌ಗೆ ನ್ಯೂಜಿಲೆಂಡ್ ಪರ 6 ವರ್ಷಗಳ ಕಾಲ  ಕೋಚ್ ಆಗಿ ಕಾರ್ಯ ನಿರ್ವಹಿಸಿದ ಅನುಭವವಿದೆ. ಹೆಸನ್ ಮಾರ್ಗದರ್ಶನದಲ್ಲಿ ನ್ಯೂಜಿಲೆಂಡ್ ಮೊದಲ ಬಾರಿಗೆ 2015ರಲ್ಲಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿತ್ತು.  ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ.

ಇದನ್ನೂ ಓದಿ: ಕೊಹ್ಲಿ ಜೊತೆ ಮಾತನಾಡಲು ಭಯವಾಗುತ್ತೆ; ಎಬಿ ಡಿವಿಲಿಯರ್ಸ್!

ಆಸ್ಟ್ರೇಲಿಯಾ ಕ್ರಿಕೆಟಿಗನಾಗಿ ಮಿಂಚಿದ ಸೈಮನ್ ಕ್ಯಾಟಿಚ್, 2015ರಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡದ ಸಹಾಯಕ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. ಆಸ್ಟ್ರೇಲಿಯಾ ಪರ 56 ಟೆಸ್ಟ್ ಪಂದ್ಯದಿಂದ 4188 ರನ್ ಹಾಗೂ 45 ಏಕದಿನ ಪಂದ್ಯದಿಂದ 1324 ರನ್ ಸಿಡಿಸಿದ್ದಾರೆ. 

ಕಳೆದ 12 ಆವೃತ್ತಿಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ರಶಸ್ತಿ ಗೆಲ್ಲಲು ವಿಫಲವಾಗಿದೆ. ಇದೀಗ  ಸೈಮನ್ ಕ್ಯಾಟಿಚ್ ಹಾಗೂ ಮೈಕ್ ಹೆಸನ್ ಆಗಮನ RCB ಅದೃಷ್ಠ ಬದಲಾಯಿಸುತ್ತಾ ಅನ್ನೋದನ್ನು ಕಾದುನೋಡಬೇಕಾಗಿದೆ.