ಕೊಹ್ಲಿ ಜೊತೆ ಮಾತನಾಡಲು ಭಯವಾಗುತ್ತೆ; ಎಬಿ ಡಿವಿಲಿಯರ್ಸ್!
ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಕಾಂಬಿನೇಷನ್ ಕ್ರಿಕೆಟ್ ಇತಿಹಾಸದಲ್ಲೇ ಅತ್ಯುತ್ತಮ. ಈ ಜೋಡಿ ಹಲವು ದಾಖಲೆಗಳನ್ನು ಬರೆದಿದೆ. RCB ತಂಡದಲ್ಲಿ ಜೊತೆಯಾಗಿ ಆಡುವ ಈ ಸ್ಟಾರ್ ಕ್ರಿಕೆಟಿಗರು ಆತ್ಮೀಯ ಗೆಳೆಯರು ಕೂಡ ಹೌದು. ಇದೀಗ ಎಬಿಡಿ ಸಂದರ್ಶನವೊಂದರಲ್ಲಿ ಕೊಹ್ಲಿ ಮುಂದೆ ಮಾತನಾಡಲು ಭಯವಾಗುತ್ತೆ ಎಂದಿದ್ದಾರೆ. ಅಷ್ಟಕ್ಕೂ ಎಬಿಡಿ ಹೀಗೆ ಹೇಳಿದ್ದು ಯಾಕೆ? ಇಲ್ಲಿದೆ ವಿವರ.
ಮುಂಬೈ(ಮೇ.18): ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್ ಆತ್ಮೀಯ ಫ್ರೆಂಡ್ಸ್. ಕೊಹ್ಲಿ ಅಗ್ರೆಸ್ಸೀವ್ ಕ್ರಿಕೆಟರ್, ಇತ್ತ ಸೌತ್ಆಫ್ರಿದಾದ ಎಬಿಡಿ ಕೂಲ್ ಕ್ರಿಕೆಟರ್. ಇವರಿಬ್ಬರ ಜೊತೆಯಾಟ ಹಲವು ದಾಖಲೆಗಳನ್ನು ಬರೆದಿದೆ. ಇಷ್ಟೇ ಅಲ್ಲ ಇವರಿಬ್ಬರು RCB ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಇದೀಗ ಕೊಹ್ಲಿ ಕುರಿತು ಎಬಿ ಡಿವಿಲಿಯರ್ಸ್ ಮನಬಿಚ್ಚಿ ಮಾತನಾಡಿದ್ದಾರೆ.
ಇದನ್ನೂ ಓದಿ: ಕೊಹ್ಲಿ ಸ್ಲೋ ಪಾಯ್ಸನ್ ಎಂದ ಟೀಂ ಇಂಡಿಯಾ ಮಾಜಿ ಕೋಚ್!
ವಿರಾಟ್ ಕೊಹ್ಲಿ ಎದರು ಏನನ್ನೂ ಹೇಳಲು ಭಯವಾಗುತ್ತೆ ಎಂದು ಎಬಿಡಿ ಹೇಳಿದ್ದಾರೆ. ಆದರೆ ಈ ಭಯ ಯಾಕೆ ಅನ್ನೋದನ್ನು ಡಿವಿಲಿಯರ್ಸ್ ಹೇಳಿದ್ದಾರೆ. ಕೊಹ್ಲಿ ಬಳಿ ವಾಚ್ ಚೆನ್ನಾಗಿದೆ ಎಂದರೆ ಸಾಕು, ಮರಕ್ಷಣವೇ ಅದೇ ರೀತಿ ವಾಚ್ ಗಿಫ್ಟ್ ನೀಡುತ್ತಾರೆ. ಇನ್ನು ಫೋನ್ ಸ್ವಿಚ್ ಆಫ್ ಆಗಿದೆ ಅಂದರೆ, ತಕ್ಷಣವೇ ಪವರ್ ಬ್ಯಾಂಕ್ ಉಡುಗೊರೆಯಾಗಿ ನೀಡುತ್ತಾರೆ. ಕೊಹ್ಲಿ ಡ್ರೆಸ್ ಚೆನ್ನಾಗಿದೆ ಎಂದರೆ ಅದೇ ಬ್ರ್ಯಾಂಡ್, ಅದೇ ಕಲರ್ ಡ್ರೆಸ್ ತರಿಸಿ ಉಡುಗೊರೆಯಾಗಿ ನೀಡುತ್ತಾರೆ. ಈ ಕಾರಣಕ್ಕೆ ಕೊಹ್ಲಿ ಮುಂದೆ ಮಾತನಾಡಲು ಭಯವಾಗುತ್ತೆ ಎಂದು ಎಬಿಡಿ ಹೇಳಿದ್ದಾರೆ.
ಇದನ್ನೂ ಓದಿ: ಮುಂದಿನ IPLನಲ್ಲಿ ನಾಲ್ವರು ನಾಯಕರಿಗೆ ಗೇಟ್ ಪಾಸ್?
ವಿರಾಟ್ ಕೊಹ್ಲಿ ಹಾಗೂ ಪತ್ನಿ ಅನುಷ್ಕಾ ಶರ್ಮಾ ತಂಡದ ಸಹ ಆಟಗಾರರ ಜೊತೆ ಆತ್ಮೀಯವಾಗಿರುತ್ತಾರೆ. ಹಲವು ಭಾರಿ ಕೊಹ್ಲಿ ಮನಗೆ ಭೇಟಿ ನೀಡಿದ್ದೇನೆ. ಕೊಹ್ಲಿ ಮನೆಯಲ್ಲಿ ಚಿಕ್ಕ ಮಕ್ಕಳು ಕೂಡ ಕೊಹ್ಲಿ ಹಾಗೂ ಅನುಷ್ಕಾ ಜೊತೆ ಆಟವಾಡುತ್ತಾರೆ. ತುಂಬಾ ಆತ್ಮೀಯತೆ, ಅತ್ಯಂತ ಗೌರವದಿಂದ ಕಾಣುವ ವ್ಯಕ್ತಿತ್ವ ಅವರದ್ದು ಎಂದು ಎಬಿ ಡಿವಿಲಿಯರ್ಸ್ ಹೇಳಿದ್ದಾರೆ.