ಪಂಜಾಬ್(ಮಾ.29): ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಮೈದಾನದಲ್ಲಿ ಬೌಂಡರಿ ಸಿಕ್ಸರ್ ಮೂಲಕ ಅಬ್ಬರಿಸಿದರೆ, ಮೈದಾನದ ಹೊರಗಡೆ ಗೇಲ್ ಅಷ್ಟೇ ಅದ್ಬುತ ಡ್ಯಾನ್ಸರ್. ಗಂಗ್ನಮ್ ಸ್ಟೈಲ್ ಡ್ಯಾನ್ಸ್ ಸ್ಟೆಪ್ಸ್‌ ಸೇರಿದಂತೆ ಹಲವು ಸಿಗ್ನೇಚರ್ ಸ್ಟೆಪ್ಸ್‌ಗಳನ್ನು ಕ್ರಿಕೆಟ್ ಅಭಿಮಾನಿಗಳಿಗೆ ತೋರಿಸಿಕೊಟ್ಟಿದ್ದ ಗೇಲ್ ಇದೀಗ ಹೊಸ ಸ್ಟೆಪ್ಸ್ ಪರಚಯಿಸಿದ್ದಾರೆ.

ಇದನ್ನೂ ಓದಿ: ಪಂಜಾಬಿ ಟರ್ಬನ್ ಧರಿಸಿ ಕ್ರಿಸ್ ಗೇಲ್ ಡ್ಯಾನ್ಸ್

ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪ್ರಮೋಶನಲ್ ಶೂಟಿಂಗ್‌ನಲ್ಲಿ ಕ್ರಿಸ್ ಗೇಲ್ ಅದ್ಬುತ ಸ್ಟೆಪ್ಸ್ ಹಾಕಿ ರಂಜಿಸಿದ್ದಾರೆ. ಹಲವು ಸ್ಟೆಪ್ಸ್ ಹಾಕಿದ ಗೇಲ್ ಡ್ಯಾನ್ಸ್ ಕೊರಿಯೊಗ್ರಾಫರ್‌ಗಳನ್ನೇ ನಾಚಿಸಿದ್ದಾರೆ. 1 ನಿಮಿಷದಲ್ಲಿ ಗೇಲ್ ಹಲವು ರೀತಿ ಸ್ಟೆಪ್ಸ್ ಹಾಕಿದ್ದಾರೆ.

&

 

ಇದನ್ನೂ ಓದಿ: ಕ್ರಿಸ್ ಗೇಲ್ ಸವಾಲಿಗೆ ಸಿದ್ದವೆಂದ ಸನ್ನಿ ಲಿಯೋನ್

12ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ಕ್ರಿಸ್ ಅದ್ಬುತ ಫಾರ್ಮ್‌ನಲ್ಲಿದ್ದಾರೆ. ರಾಜಸ್ಥಾನ ರಾಯಲ್ಸ್ ವಿರುದ್ದದ ಮೊದಲ ಪಂದ್ಯದಲ್ಲಿ ಗೇಲ್ 47 ಎಸೆತದಲ್ಲಿ 79 ರನ್ ಚಚ್ಚಿದರು. ಇದೀಗ ಡ್ಯಾನ್ಸ್ ಮೂಲಕ ಅಬ್ಬರಿಸುತ್ತಿದ್ದಾರೆ.