12ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ಸಂಜು ಸಾಮ್ಸನ್ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ. 2017 ಹಾಗೂ 2019ರ ಐಪಿಎಲ್ ಟೂರ್ನಿಗಳಲ್ಲಿ ಸಂಜು ಸಾಮ್ಸನ್ ಸೆಂಚುರಿ ಸಿಡಿಸಿ ಮಿಂಚಿದ್ದಾರೆ. ಈ ಎರಡು ಐಪಿಎಲ್ ಶತಕದಲ್ಲಿ ಹಲವು ಸಾಮ್ಯತೆ ಇದೆ. ಇಲ್ಲಿದೆ ಹೆಚ್ಚಿನ ವಿವರ.
ಹೈದರಾಬಾದ್(ಮಾ.29): 12ನೇ ಆವೃತ್ತಿಯಲ್ಲಿ ಐಪಿಎಲ್ ಟೂರ್ನಿಯಲ್ಲಿ ಮೊದಲ ಶತಕ ದಾಖಲಾಗಿದೆ. ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಬ್ಯಾಟ್ಸ್‌ಮನ್ ಸಂಜು ಸಾಮ್ಸನ್ ಭರ್ಜರಿ ಶತಕ ಸಿಡಿಸಿ ಅಬ್ಬರಿಸಿದ್ದಾರೆ. ಈ ಮೂಲಕ ಐಪಿಎಲ್ ಟೂರ್ನಿಯಲ್ಲಿ 2ನೇ ಶತಕ ಸಿಡಿಸಿದ್ದಾರೆ.
ಇದನ್ನೂ ಓದಿ: ಮುಂಬೈ ವಿರುದ್ಧ RCB ಸೋಲು- ನೋ ಬಾಲ್ ಕುರಿತು ಕೊಹ್ಲಿ ಹೇಳಿದ್ದಿಷ್ಟು!
ರಾಜಸ್ಥಾನ ಬೌಲರ್ ವಿರುದ್ಧ ಅಬ್ಬರಿಸಿದ ಸಂಜು 54 ಎಸೆತದಲ್ಲಿ ಶತಕ ಪೂರೈಸಿದರು. ಒಟ್ಟು 55 ಎಸೆತ ಎದುರಿಸಿದ ಸಂಜು ಸಾಮ್ಸನ್ 10 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ ಅಜೇಯ 102 ರನ್ ಬಾರಿಸಿದರು. 185.45ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ ಸಂಜು ಸೆಂಚುರಿ ಹೀರೋ ಆಗಿ ಮಿಂಚಿದರು.
ಇದನ್ನೂ ಓದಿ: IPL ಕ್ರಿಕೆಟ್‌ನಲ್ಲಿ ದಾಖಲೆ ಬರೆದ RCB ನಾಯಕ ವಿರಾಟ್ ಕೊಹ್ಲಿ!
2017ರ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ಪರ ಕಣಕ್ಕಿಳಿದಿದ್ದ ಸಂಜು ಸಾಮ್ಸನ್, ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ವಿರುದ್ಧ ಸೆಂಚುರಿ ಸಿಡಿಸಿದ್ದರು. 62 ಎಸೆತದಲ್ಲಿ ಸಾಮ್ಸನ್ ಶತಕ ಪೂರೈಸಿದ್ದರು. ವಿಶೇಷ ಅಂದರೆ 2017ರಲ್ಲೂ ಸಂಜು 102 ರನ್ ಸಿಡಿಸಿದ್ದರು. ಇದೀಗ 2019ರಲ್ಲೂ 102 ರನ್ ಭಾರಿಸಿದ್ದಾರೆ.
