ಹೈದರಾಬಾದ್(ಏ.17): ನಾಯಕ ಎಂ.ಎಸ್.ಧೋನಿ ವಿಶ್ರಾಂತಿಗೆ ನೀಡಿದ CSK, ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ನೀಡಲು ವಿಫಲವಾಗಿದೆ. ಹೈದರಾಬಾದ್‌ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಚೆನ್ನೈ 5 ವಿಕೆಟ್ ನಷ್ಟಕ್ಕೆ 132 ರನ್ ಸಿಡಿಸಿದೆ. ಇದೀಗ ಸನ್ ರೈಸರ್ಸ್ ಗೆಲುವಿಗೆ 133 ರನ್ ಸಿಡಿಸಬೇಕಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಶೇನ್ ವ್ಯಾಟ್ಸ್‌ನ್ ಹಾಗೂ ಫಾಫ್ ಡುಪ್ಲೆಸಿಸ್ 79 ರನ್ ಜೊತೆಯಾಟ ನೀಡಿದರು. ಆದರೆ CSK ನಿಧಾನಗತಿಯಲ್ಲಿ ಬ್ಯಾಟ್ ಬೀಸಿತು. ಬೌಲಿಂಗ್ ಸಹಾರಿ ಪಿಚ್‌ನಲ್ಲಿ ಎಚ್ಚರಿಕೆಯಿಂದ ಬ್ಯಾಟ್ ಬೀಸಿದ ಶೇನ್ ವ್ಯಾಟ್ಸನ್ 31 ರನ್ ಸಿಡಿಸಿ ಔಟಾದರು. ಇನ್ನು ಡುಪ್ಲೆಸಿಸ್ 45 ರನ್ ಸಿಡಿಸಿ ಔಟಾದರು.

ಧೋನಿ ಬದಲು ತಂಡದ ನಾಯಕತ್ವ ವಹಿಸಿಕೊಂಡ ಸುರೇಶ್ ರೈನಾ 13 ರನ್ ಸಿಡಿಸಿ ನಿರ್ಗಮಿಸಿದರು. ಕೇದಾರ್ ಜಾಧವ್, ಸ್ಯಾಮ್ ಬಿಲ್ಲಿಂಗ್ಸ್ ಅಬ್ಬರಿಸಲಿಲ್ಲ.ಅಂಬಾಟಿ ರಾಯುಡು ಅಜೇಯ 25 ಹಾಗೂ ರವೀಂದ್ರ ಜಡೇಜಾ ಅಜೇಯ 10 ರನ್ ಸಿಡಿಸಿದರು. ಈ ಮೂಲಕ CSK 5 ವಿಕೆಟ್ ನಷ್ಟಕ್ಕೆ 132 ರನ್ ಸಿಡಿಸಿತು.