ಹೈದರಾಬಾದ್(ಏ.21): ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ನಡೆದ ಲೀಗ್ ಪಂದ್ಯದಲ್ಲಿ ತವರಿನ ಸನ್ ರೈಸರ್ಸ್ ಹೈದರಾಬಾದ್ 9 ವಿಕೆಟ್ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ SRH ಸತತ 2ನೇ ಗೆಲುವಿನ ಸಿಹಿಕಿ ಕಂಡರೆ, ಮಹತ್ವದ ಪಂದ್ಯದಲ್ಲಿ KKR ಮಗ್ಗರಿಸೋ ಮೂಲಕ ಸತತ 5ನೇ ಸೋಲು ಕಂಡಿದೆ.

ಗೆಲುವಿಗೆ 161 ರನ್ ಟಾರ್ಗೆಟ್ ಪಡೆದ ಸನ್ ರೈಸರ್ಸ್ ಯಾವ ಹಂತದಲ್ಲೂ ಆತಂಕ ಎದುರಿಸಲಿಲ್ಲ. ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಡೇವಿಡ್ ವಾರ್ನರ್ ಹಾಗೂ ಜಾನಿ ಬೈರ್‌ಸ್ಟೋ ಜೊತೆಯಾಟಕ್ಕೆ SRH ಗೆಲುವಿನ ಹಾದಿ ಸುಗಮಗೊಂಡಿತು. ಇವರ ಜೊತೆಯಾಟಕ್ಕೆ ಬ್ರೇಕ್ ಹಾಕಲು 6 ಬೌಲರ್‌ಗಳನ್ನು ಕೆಕೆಆರ್ ಕಣಕ್ಕಿಳಿಸಿದರೂ ಯಾವುದೇ ಪ್ರಯೋಜನವಾಗಿಲಿಲ್ಲ.

ವಾರ್ನರ್ ಹಾಗೂ ಬೈರ್‌ಸ್ಟೋ ಆಕರ್ಷಕ ಅರ್ಧಶತಕ ಸಿಡಿಸಿದರು. ಮೊದಲ ವಿಕೆಟ್‌ಗೆ ಈ ಜೋಡಿ 131 ರನ್ ಜೊತೆಯಾ ನೀಡಿತು. ವಾರ್ನರ್ 38 ಎಸೆತದಲ್ಲಿ 67 ರನ್ ಸಿಡಿಸಿತು. ಜಾನಿ ಬೈರ್‌ಸ್ಟೋ ಅಜೇಯ 80 ರನ್ ಸಿಡಿಸಿದರು. ಇತ್ತ ನಾಯಕ ಕೇನ್ ವಿಲಿಯಮ್ಸನ್ 8 ರನ್ ಕಾಣಿಕೆ ನೀಡಿದರು. ಈ ಮೂಲಕ ಹೈದರಾಬಾದ್ 15 ಓವರ್‌ಗಳಲ್ಲಿ 1 ವಿಕೆಚ್ ಕಳೆದುಕೊಂಡು  ಗೆಲುವು ಸಾಧಿಸಿತು.