ಐಪಿಎಲ್ ಟೂರ್ನಿಯಲ್ಲಿಂದ ಹ್ಯಾಟ್ರಿಕ್ ಸೋಲಿನ ಸರದಾರರೊಬ್ಬರ ಸೋಲು ಅಂತ್ಯಗೊಳ್ಳಲಿದೆ. ರಾಜಸ್ಥಾನ ರಾಯಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಐಪಿಎಲ್ ಲೀಗ್ ಪಂದ್ಯ ಇದೇ ಕಾರಣಕ್ಕೆ ಕುತೂಹಲದ ಕೇಂದ್ರ ಬಿಂದುವಾಗಿದೆ. ಈಗಾಗಲೇ ಟಾಸ್ ಗೆದ್ದಿರುವ RR  ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ತಂಡದ ಬದಲಾವಣೆ ಏನು? ಇಲ್ಲಿದೆ ವಿವರ.

ಜೈಪುರ(ಏ.02):12ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ಹ್ಯಾಟ್ರಿಕ್ ಸೋತವರು ಮುಖಾಮುಖಿಯಾಗುತ್ತಿದ್ದಾರೆ. ಒಂದೆಡೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮತ್ತೊಂದೆಡೆ ರಾಜಸ್ಥಾನ ರಾಯಲ್ಸ್. ಎರಡು ತಂಡಗಳು ಆರಂಭಿಕ 3 ಪಂದ್ಯ ಸೋತಿದೆ. ಇದೀಗ ಗೆಲುವಿಗಾಗಿ ನಡೆಯುತ್ತಿರುವ ಹೋರಾಟದಲ್ಲಿ ಟಾಸ್ ಗೆದ್ದಿರುವ RR ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.

ಇದನ್ನೂ ಓದಿ: ಮುಂಬೈ ಇಂಡಿಯನ್ಸ್‌ಗೆ ಕೈಕೊಟ್ಟ ಮಾಲಿಂಗ- ಲಂಕಾಗೆ ವಾಪಾಸ್!

ರಾಯಲ್ ಚಾಲೆಂಜರ್ಸ್ ತಂಡದಲ್ಲಿ 3 ಬದಲಾವಣೆ ಮಾಡಲಾಗಿದೆ. ಕೊಲಿನ್ ಡೇ ಗ್ರ್ಯಾಂಡ್ ಹೊಮ್ಮೆ ಬದಲು ಮಾರ್ಕಸ್ ಸ್ಟೊಯ್ನಿಸ್ ತಂಡ ಸೇರಿಕೊಂಡಿದ್ದಾರೆ. ಪ್ರಯಾಸ್ ರೇ ಬರ್ಮನ್ ಬದಲು ನವದೀಪ್ ಸೈನಿ ಮತ್ತೆ ತಂಜಕ್ಕೆ ವಾಪಾಸ್ಸಾಗಿದ್ದರೆ, ಶಿವಂ ದುಬೆ ಬದಲು ಅಕ್ಷದೀಪ್ RCB ತಂಡ ಸೇರಿಕೊಂಡಿದ್ದಾರೆ. 

Scroll to load tweet…

Scroll to load tweet…

RCB ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋಲು ಅನುಭವಿಸಿದರೆ, 2ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಮುಗ್ಗರಿಸಿತು. ಇನ್ನು ಮೂರನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಸೋಲು ಕಂಡಿತು. ಇತ್ತ ರಾಜಸ್ಥಾನ ರಾಯಲ್ಸ್, ಕಿಂಗ್ಸ್ ಇಲೆವೆನ್ ಪಂಜಾಬ್, ಸನ್ ರೈಸರ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮುಗ್ಗರಿಸಿದೆ.