ಬೆಂಗಳೂರು(ಏ.24): ಪಾರ್ಥೀವ್ ಪಟೇಲ್ ಹಾಗೂ ಎಬಿ ಡಿವಿಲಿಯರ್ಸ್ ಹೋರಾಟದಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಬ್ಬರಿಸಿದೆ. RCB 4 ವಿಕೆಟ್ ನಷ್ಟಕ್ಕೆ 202 ರನ್ ಸಿಡಿಸಿದೆ . ಈ ಮೂಲಕ ಪಂಜಾಬ್ ಗೆಲುವಿಗೆ 203 ರನ್ ಟಾರ್ಗೆಟ್ ನೀಡಿದೆ.

ಟಾಸ್ ಸೋತು ಬ್ಯಾಟಿಂಗ್ ಇಳಿದ RCBಗೆ  ಪಾರ್ಥೀವ್ ಪಟೇಲ್ ಉತ್ತಮ ಆರಂಭ ನೀಡಿದರು. ಆದರೆ ವಿರಾಟ್ ಕೊಹ್ಲಿ ಕೇವಲ 13 ರನ್ ಸಿಡಿಸಿ ನಿರಾಸೆ ಅನುಭಿವಿಸಿದರು. ಮೊದಲ ವಿಕೆಟ್‌ಗೆ ಕೊಹ್ಲಿ ಹಾಗೂ ಪಾರ್ಥೀವ್ 35 ರನ್ ಜೊತೆಯಾಟ ನೀಡಿತು. ಹೋರಾಟ ನೀಡಿದ ಪಾರ್ಥೀವ್ 43 ರನ್ ಸಿಡಿಸಿ ಔಟಾದರು.

ಮೊಯಿನ್ ಹಾಗೂ ಅಕ್ಷದೀಪ್ ನಾಥ್ ನೆರವಾಗಲಿಲ್ಲ. ಆದರೆ ಎಬಿ ಡಿವಿಲಿಯರ್ಸ್ ಅಬ್ಬರಿಸಿದರು. ಮಾರ್ಕಸ್ ಸ್ಟೊಯ್ನಿಸ್ ಜೊತೆ ಸೇರಿದ ಎಬಿಡಿ RCB ರನ್ ವೇಗ ಹೆಚ್ಚಿಸಿದರು. ಎಬಿಡಿ ಅರ್ಧಶತಕ ಸಿಡಿಸಿ ಮಿಂಚಿದರು.  ಎಬಿಡಿ 44 ಸೆತದಲ್ಲಿ 3 ಬೌಂಡರಿ ಹಾಗೂ 7 ಸಿಕ್ಸರ್ ನೆರವಿನಿಂದ ಅಜೇಯ 82 ರನ್ ಸಿಡಿಸಿದರು. ಸ್ಟೊಯ್ನಿಸ್ 34 ಎಸೆತದಲ್ಲಿ ಅಜೇಯ 46 ರನ್ ಸಿಡಿಸಿದರು. ಈ ಮೂಲಕ Rcb 4 ವಿಕೆಟ್ ನಷ್ಟಕ್ಕೆ 202 ರನ್ ಸಿಡಿಸಿತು.