ಬೆಂಗಳೂರು(ಏ.30): ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ ರಾಯಲ್ಸ್ ನಡುವಿನ ಪಂದ್ಯದ ಟಾಸ್ ಪ್ರಕ್ರಿಯೆ ಮುಗಿದಿದೆ. ಟಾಸ್ ಗೆದ್ದಿರುವ  ರಾಜಸ್ಥಾನ ರಾಯಲ್ಸ್ ಫೀಲ್ಡಿಂಗ್ ಆಯ್ಕೆ ಮಾಡಿದೆ. ಆದರೆ ಈ ಆವೃತ್ತಿಯಲ್ಲಿ 10ನೇ ಟಾಸ್ ಸೋತ ಬೆನ್ನಲ್ಲೇ RCBಗೆ ನಿರಾಸೆಯಾಗಿದೆ. ಟಾಸ್ ಮುಗಿಯುತ್ತಿದ್ದಂತೆ ತುಂತುರು ಮಳೆ ಸುರಿಯುತ್ತಿದೆ. ಹೀಗಾಗಿ ಪಂದ್ಯ ಆರಂಭ ವಿಳಂಭವಾಗಲಿದೆ. ಇಷ್ಟೇ ಅಲ್ಲ ಮೊದಲು ಬ್ಯಾಟಿಂಗ್ ಕೂಡ ಕಷ್ಟವಾಗಲಿದೆ.

 

 

ಇಂದಿನ ಪಂದ್ಯಕ್ಕಾಗಿ RCB 2 ಬದಲಾವಣೆ ಮಾಡಲಾಗಿದೆ. ವಾಶಿಂಗ್ಟನ್ ಸುಂದರ್ ಬದಲು ಪವನ್ ನೇಗಿ ಹಾಗೂ ಶಿವಂ ದುಬೆ ಬದಲು ಕುಲ್ವಂತ್ ಕೆಜ್ರೋಲಿಯ ತಂಡ ಸೇರಿಕೊಂಡಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಡಿದ 12 ಪಂದ್ಯದಲ್ಲಿ 4 ಗೆಲುವು ಸಾಧಿಸಿದೆ. ಇನ್ನುಳಿದ 8 ಪಂದ್ಯಗಳನ್ನು ಸೋತು 8ನೇ ಸ್ಥಾನದಲ್ಲಿದೆ. ಇನ್ನು ರಾಜಸ್ಥಾನ ಹೋರಾಟ ಇದಕ್ಕಿಂತ ಭಿನ್ನವಾಗಿಲ್ಲ. ಆಡಿದ 12ರಲ್ಲಿ 5 ಗೆಲುವು ಸಾಧಿಸೋ ಮೂಲಕ 7ನೇ ಸ್ಥಾನದಲ್ಲಿದೆ.