ಬೆಂಗಳೂರು(ಏ.30):ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ ರಾಯಲ್ಸ್ ನಡುವಿನ ಪಂದ್ಯ 12ನೇ ಆವೃತ್ತಿ ಐಪಿಎಲ್ ಟೂರ್ನಿಯ ರೋಚಕ ಪಂದ್ಯ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.  ಮಳೆಯಿಂದಾಗಿ 5 ಓವರ್‌ಗೆ ಸೀಮಿತವಾಗಿದ್ದ ಪಂದ್ಯ ಮತ್ತೆ ಮಳೆ ಕಾಟಕ್ಕೆ ತುತ್ತಾಯಿತು. ಹೀಗಾಗಿ ಪಂದ್ಯ ರದ್ದುಗೊಂಡಿದೆ. ಈ ಮೂಲಕ ಉಭಯ ತಂಡಗಳು ತಲಾ 1 ಅಂಕ ಸಂಪಾದಿಸಿತು. ಇಷ್ಟೇ ಅಲ್ಲ ಈ ಮೂಲಕ RCB 12ನೇ ಆವೃತ್ತಿ ಐಪಿಎಲ್ ಟೂರ್ನಿಯಿಂದ ಹೊರಬಿತ್ತು.

ಗೆಲುವಿಗೆ 63 ರನ್ ಟಾರ್ಗೆಟ್ ಪಡೆದ ರಾಜಸ್ಥಾನ ರಾಯಲ್ಸ್, ಮೊದಲ ಎಸೆವನ್ನೇ ಸಿಕ್ಸರ್ ಗಟ್ಟಿತು. 2ನೇ ಎಸೆತದಲ್ಲಿ ಸಂಜು ಸಾಮ್ಸನ್ ಬೌಂಡರಿ ಬಾರಿಸಿ ಅಬ್ಬರಿಸಿದರು. ಸಾಮ್ಸನ್‌ಗೆ ಲಿಯಾಮ್ ಲಿವಿಂಗ್‌ಸ್ಟೋನ್ ಉತ್ತಮ ಸಾಥ್ ನೀಡಿದರು.  ರಾಜಸ್ಥಾನ ಗೆಲುವಿಗೆ ಅಂತಿಮ 12 ಎಸೆತದಲ್ಲಿ 23 ರನ್ ಬೇಕಿತ್ತು.

ಸಂಜು ಸಾಮ್ಸನ್ 28 ರನ್ ಸಿಡಿಸಿ ಔಟಾದರು. ಅಷ್ಟರಲ್ಲೇ ಮತ್ತೆ ಮಳೆ ಅಡ್ಡಿಪಡಿಸಿತು. ಹೀಗಾಗಿ ಪಂದ್ಯವನ್ನು ರದ್ದುಪಡಿಸಲಾಯಿತು. ಹೀಗಾಗಿ 2 ಅಂಕ ಹಂಚಿಕೊಂಡರು. ಇದೀಗ RCB ಟೂರ್ನಿಯಿಂದ ಹೊರಬಿದ್ದಿದೆ. ಉಳಿದಿರುವ ಇನ್ನೊಂದು ಪಂದ್ಯದಲ್ಲಿ ಗೆಲುವು ಸಾಧಿಸಿ ಸೋಲಿನ ಅಂತರ ಕಡಿಮೆ ಮಾಡಿಕೊಳ್ಳುವುದೊಂದೇ ಆರ್‌ಸಿಬಿ ಮುಂದಿರುವ ದಾರಿ.