ಮೊಹಾಲಿ(ಏ.16): ಐಪಿಎಲ್ ಟೂರ್ನಿಯ 32ನೇ ಲೀಗ್ ಹೋರಾಟದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ರಾಜಸ್ಥಾನ ರಾಯಲ್ಸ್ ಮುಖಾಮುಖಿಯಾಗುತ್ತಿದೆ. ಮೊಹಾಲಿಯ ಐಎಸ್ ಬಿಂದ್ರಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. 

ಇದನ್ನೂ ಓದಿ: RCBಗೆ ಇನ್ನೂ ಇದೆಯಾ ಪ್ಲೇ ಆಫ್ ಅವಕಾಶ- ಚಹಲ್ ನೀಡಿದ್ರು ಉತ್ತರ!

ತವರಿನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಗೆಲುವಿನ ಫೇವರಿಟ್ ಎನಿಸಿಕೊಂಡಿದೆ. ಈ ಆವೃತ್ತಿಯಲ್ಲಿಆಡಿದ 8 ಪಂದ್ಯಗಳಲ್ಲಿ 4 ರಲ್ಲಿ ಗೆಲುವು 4ರಲ್ಲಿ ಸೋಲು ಕಂಡಿರುವ ಪಂಜಾಬ್ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಇತ್ತ ರಾಜಸ್ಥಾನ ರಾಯಲ್ಸ್ 7ರಲ್ಲಿ 2 ಗೆಲುವು 5 ಸೋಲು ಅನುಭವಿಸೋ ಮೂಲಕ 7ನೇ ಸ್ಥಾನದಲ್ಲಿದೆ.