ಜೈಪುರ(ಮಾ.25): ಐಪಿಎಲ್ 12ನೇ ಆವೃತ್ತಿಯ 4ನೇ ಲೀಗ್ ಪಂದ್ಯದಲ್ಲಿ ಆತಿಥೇಯ ರಾಜಸ್ಛಾನ ರಾಯಲ್ಸ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ಮುಖಾಮುಖಿಯಾಗುತ್ತಿದೆ. ಈಗಾಗಲೇ ಟಾಸ್ ಪ್ರಕ್ರಿಯೆ ಮುಗಿದಿದೆ. ರಾಜಸ್ಥಾನ ರಾಯಲ್ಸ್  ಟಾಸ್ ಗೆದ್ದು, ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.

 

 

ಇದನ್ನೂ ಓದಿ: ಮತ್ತೆ ಮನೆಗೆ ಹೋಗೋ ಪ್ಲಾನ್ ಇದೆಯಾ? ಕೇದಾರ್ ಟ್ರೋಲ್ ಮಾಡಿ ಧೋನಿ!

ಕಳೆದ ಆವೃತ್ತಿಯಿಂದ ಹೊರಗುಳಿದಿದ್ದ ಸ್ಟೀವ್ ಸ್ಮಿತ್ ಇದೀಗ ರಾಜಸ್ಥಾನ ರಾಯಲ್ ತಂಡ ಸೇರಿಕೊಂಡಿದ್ದಾರೆ. ಅಜಿಂಕ್ಯ ರಹಾನೆ ನಾಯಕಾಗಿ ಮುಂದುವರಿಯುತ್ತಿದ್ದಾರೆ. ಹೀಗಾಗಿ ತಂಡ ಮತ್ತಷ್ಟು ಬಲಿಷ್ಠವಾಗಿದೆ. ಇತ್ತ ಆರ್ ಅಶ್ವಿನ್ ನಾಯಕತ್ವದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿ, ಕ್ರಿಸ್ ಗೇಲ್, ಕೆಎಲ್ ರಾಹುಲ್ ಸೇರಿದಂತೆ ಘಟಾನುಘಟಿ ಆಟಾಗರೇ ತುಂಬಿಕೊಂಡಿದ್ದಾರೆ.