ಜೈಪುರ(ಏ.22): ಸಾವಾಯಿ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಾಜಸ್ಥಾನ ರಾಯಲ್ಸಾ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯ ತೀವ್ರ ಕುತೂಹಲ ಕೆರಳಿಸಿದೆ. ಅಜಿಂಕ್ಯ ರಹಾನೆ ಹಾಗೂ ನಾಯಕ ಸ್ಟೀವ್ ಸ್ಮಿತ್ ಅರ್ಧಶತಕದ ನೆರವಿನಿಂದ ರಾಜಸ್ಥಾನ 6 ವಿಕೆಟ್ ನಷ್ಡಕ್ಕೆ191 ರನ್ ಸಿಡಿಸಿದೆ.

ಟಾಸ್ ಸೋತು ಬ್ಯಾಟಿಂಗ್ ಇಳಿದ ರಾಜಸ್ಥಾನ ಆರಂಭದಲ್ಲೇ ಸಂಜು ಸಾಮ್ಸನ್ ವಿಕೆಟ್ ಕಳೆದುಕೊಂಡಿತು. ಸಾಮ್ಸನ್ ರನ್ ಖಾತೆ ತೆರೆಯೋ ಮುನ್ನವೇ ರನೌಟ್‌ಗೆ ಬಲಿಯಾದರು. ಆದರೆ ಅಜಿಂಕ್ಯ ರಹಾನೆ ಹಾಗೂ ನಾಯಕ ಸ್ಟೀವ್ ಸ್ಮಿತ್ ಸ್ಫೋಟಕ ಬ್ಯಾಟಿಂಗ್ ಮೂಲಕ ಡೆಲ್ಲಿ ಲೆಕ್ಕಾಚಾರ ಉಲ್ಟಾ ಮಾಡಿದರು.

ರಹಾನೆ ಹಾಗೂ ಸ್ಮಿತ್ ಜೋಡಿ ಬೇರ್ಪಡಿಸಲು ಡೆಲ್ಲಿ 6 ಬೌಲರ್‌ಗಳ ಪ್ರಯತ್ನ ನಡೆಸಿತು. ಆದರೆ ಈ ಜೋಡಿ 135 ರನ್ ಜೊತೆಯಾಟ ನೀಡಿತು. ಉಭಯ ಆಟಗಾರರು ಅರ್ಧಶತಕ ದಾಖಲಿಸಿದರು. ಹಾಫ್ ಸೆಂಚುರಿ ಸಿಡಿಸಿದ ಬೆನ್ನಲ್ಲೇ ಸ್ಮಿತ್ ವಿಕೆಟ್ ಪತನಗೊಂಡಿತು. ಇನ್ನು ಬೆನ್ ಸ್ಟೋಕ್ಸ್ 8 ರನ್ ಸಿಡಿಸಿ ನಿರ್ಗಮಿಸಿದರು.

ಅಬ್ಬರಿಸಿದ ರಹಾನೆ ಐಪಿಲ್ ಕ್ರಿಕೆಟ್‌ನಲ್ಲಿ 2ನೇ ಶತಕ ದಾಖಲಿಸಿದರು. 58 ಎಸೆತದಲ್ಲಿ ರಹಾನೆ ಸೆಂಚುರಿ ಸಿಡಿಸಿದರು. ಇತ್ತ ಆಶ್ಟನ್ ಟರ್ನರ್ ಶೂನ್ಯ ಸುತ್ತಿದರು. ಅಂತಿಮ ಹಂತದಲ್ಲಿ ಸ್ಟುವರ್ಟ್ ಬಿನ್ನಿ ಹಾಗೂ ರಹಾನೆ ಜೊತೆಯಾ ನೀಡಿದರು. ರಹಾನೆ ಅಜೇಯ 105 ರನ್ ಸಿಡಿಸಿದರೆ, ಬಿನ್ನಿ 19 ರನ್ ಭಾರಿಸಿದರು. ಈ ಮೂಲಕ ರಾಜಸ್ಥಾನ 6 ವಿಕೆಟ್ ನಷ್ಟಕ್ಕೆ 191 ರನ್ ಸಿಡಿಸಿತು. ಇದೀಗ ಡೆಲ್ಲಿ ಗೆಲುವಿಗೆ 192 ರನ್ ಸಿಡಿಸಬೇಕಿದೆ.