Asianet Suvarna News Asianet Suvarna News

IPL 2019: ಫಲಿಸಲಿಲ್ಲ ಪ್ರಾರ್ಥನೆ- RCB ಸೋಲಿನ ಸಂಖ್ಯೆ 4ಕ್ಕೆ ಏರಿಕೆ!

12ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ಸೋತವರ ಸಮರದಲ್ಲಿ ರಾಜಸ್ಥಾನ ರಾಯಲ್ಸ್ ಗೆಲುವು ಸಾಧಿಸಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತೆ ಸೋಲಿಗೆ ಶರಣಾಗಿದೆ. ಆದರೆ ಪಂದ್ಯ ಅಂತಿಮ ಘಟ್ಟದವರೆಗೂ ಕುತೂಹಲ ಹಿಡಿದಿಟ್ಟುಕೊಂಡಿತ್ತು. ಇಲ್ಲಿದೆ ಹೈಲೈಟ್ಸ್.

IPL 2019 Rajasthan royals registered maiden victory against RCB in Jaipur
Author
Bengaluru, First Published Apr 2, 2019, 11:31 PM IST

ಜೈಪುರ(ಏ.02): 12ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ  ಕೊನೆಗೂ ಗೆಲುವಿನ ಸಿಹಿ ಕಂಡಿದೆ. ಸತತ 3 ಪಂದ್ಯ ಸೋತು ನಿರಾಸೆ ಅನುಭವಿಸಿದ್ದ ಬೆಂಗಳೂರು 4ನೇ ಪಂದ್ಯದಲ್ಲಿ ಗೆಲುವಿನ ಲಯಕ್ಕೆ ಮರಳಿದೆ. ರಾಜಸ್ಥಾನ ರಾಯಲ್ಸ್ ವಿರುದ್ಧ ನಡೆದದ ಪಂದ್ಯದಲ್ಲಿ RCB ರನ್ ಗೆಲುವು ದಾಖಲಿಸಿದೆ. ಇದರೊಂದಿಗೆ ರಾಜಸ್ಥಾನ ರಾಯಲ್ಸ್ ಸೋಲಿನ ಸಂಖ್ಯೆ 4ಕ್ಕೆ ಏರಿಕೆಯಾಗಿದೆ.

RCB ನೀಡಿದ 159 ರನ್ ಟಾರ್ಗೆಟ್ ಬೆನ್ನಟ್ಟಿದ ರಾಜಸ್ಥಾನ ರಾಯಲ್ಸ್, ಉತ್ತಮ ಆರಂಭ ಪಡೆಯಿತು. 
ನಾಯಕ ಅಜಿಂಕ್ಯ ರಹಾನೆ ಹಾಗೂ ಜೋಸ್ ಬಟ್ಲರ್ ಮೊದಲ ವಿಕೆಟ್‌ಗೆ 60 ರನ್ ಜೊತೆಯಾಟ ನೀಡಿದರು. ಆದರೆ ರಹಾನೆ 22 ರನ್ ಸಿಡಿಸಿ ಔಟಾದರು. ತಂಡಕ್ಕೆ ಆಸರೆಯಾದ ಜೋಸ್ ಬಟ್ಲರ್ ಅರ್ಧಶತಕ ಸಿಡಿಸಿದರು.

ಬಟ್ಲರ್ 59  ರನ್ ಸಿಡಿಸಿ ಔಟಾದರು.  ಆದರೆ ಸ್ಟೀವ್ ಸ್ಮಿತ್ ಹಾಗೂ ರಾಹುಲ್ ತ್ರಿಪಾಠಿ ಜೊತೆಯಾಟದಿಂದ ರಾಜಸ್ಥಾನ ರಾಯಲ್ಸ್ ಗೆಲುವಿನತ್ತ ಹೆಜ್ಜೆ ಇಟ್ಟಿತು. ಇತ್ತ RCB ಪಂದ್ಯದಲ್ಲಿ ಮೇಲುಗೈ ಸಾಧಿಸಲು ಕಠಿಣ ಹೋರಾಟ ನಡೆಸಿತು. ಆದರೆ ಕ್ಯಾಚ್ ಕೈಚೆಲ್ಲಿ ದುಬಾರಿಯಾದರು. ಕಳಪೆ ಫೀಲ್ಡಿಂಗ್ RCB ಹಿನ್ನಡೆಗೆ ಕಾರಣಾಯಿತು. 

ಆಸರೆಯಾಗಿದ್ದ ಸ್ಟೀವ್ ಸ್ಮಿತ್ 38 ರನ್ ಸಿಡಿಸಿ ಔಟಾದರು. ರಾಜಸ್ಥಾನ ಗೆಲುವಿಗೆ ಅಂತಿಮ 6 ಎಸೆತಕ್ಕೆ 5 ರನ್ ಬೇಕಿತ್ತು. ರಾಹುಲ್ ತ್ರಿಪಾಠಿ ಹಾಗೂ ಬೆನ್ ಸ್ಟೋಕ್ಸ್ ಬ್ಯಾಟಿಂಗ್‌ನಿಂದ ಗೆಲುವಿನ ದಡ ಸೇರಿತು. ರಾಜಸ್ಥಾನ ರಾಯಲ್ಸ್ 19.4 ಓವರ್‌ಗಳಲ್ಲಿ 7 ವಿಕೆಟ್ ಗೆಲುವು ಸಾಧಿಸಿತು.  ತ್ರಿಪಾಠಿ ಅಜೇಯ 34 ರನ್ ಸಿಡಿಸಿದರು. ರಾಜಸ್ಥಾನ ಮೊದಲ ಗೆಲುವು ಸಾಧಿಸಿದರೆ, RCB ಮಾತ್ರ 4ನೇ ಸೋಲಿಗೆ ಗುರಿಯಾಯಿತು.
 

Follow Us:
Download App:
  • android
  • ios