ಜೈಪುರ(ಏ.02): ಐಪಿಎಲ್ ಟೂರ್ನಿಯಲ್ಲಿಂದು ಸೋತವರ ಸಮರ. ಆರಂಭಿಕ 3 ಪಂದ್ಯಗಳನ್ನು ಸೋತಿರುವ ರಾಜಸ್ಥಾನ ರಾಯಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಖಾಮುಖಿಯಾಗುತ್ತಿದೆ. ಇಂದು ಒಂದು ತಂಡ ತನ್ನ ಸೋಲಿನ ಸರಮಾಲೆಗೆ ಅಂತ್ಯಹಾಡಲಿದೆ. ಅದು RCB ಆಗಲಿ ಅನ್ನೋದು ಅಭಿಮಾನಿಗಳ ಆಶಯ.

ಇದನ್ನೂ ಓದಿ: ಹ್ಯಾಟ್ರಿಕ್ ಸೋತವರಲ್ಲಿ ಗೆಲ್ಲೋರು ಯಾರು..?

ಇಂದಿನ ಪಂದ್ಯಕ್ಕಾಗಿ ಉಭಯ ತಂಡಗಳು ಹೆಚ್ಚಿನ ಬದಲಾವಣೆ ಮಾಡುವ ಸಾಧ್ಯತೆಗಳು ಕಡಿಮೆ. ಬೆಂಗಳೂರು ತಂಡದಲ್ಲಿ 16ರ ಹುಡುಗ ಪ್ರಯಾಸ್ ರೇ ಬರ್ಮನ್‌ಗ ಮತ್ತೊಂದು ಅವಕಾಶ ನೀಡೋ ಸಾಧ್ಯತೆ ಇದೆ. ಹೀಗಾದಲ್ಲಿ ನವದೀಪ್ ಸೈನಿ ಅವಕಾಶಕ್ಕಾಗಿ ಕಾಯಬೇಕಿದೆ. ಇಲ್ಲಿದೆ ಸಂಭವನೀಯ ತಂಡ.

ಇದನ್ನೂ ಓದಿ: ಪ್ರೀತಿ ಝಿಂಟಾ ಜೊತೆ ಬಾಂಗ್ರಾ ಡ್ಯಾನ್ಸ್ ಮಾಡಿದ ಹ್ಯಾಟ್ರಿಕ್ ವಿಕೆಟ್ ಸಾಧಕ!

RCB ಸಂಭವನೀಯ ತಂಡ:
ವಿರಾಟ್ ಕೊಹ್ಲಿ(ನಾಯಕ), ಎಬಿ ಡಿವಿಲಿಯರ್ಸ್, ಮೊಯಿನ್ ಆಲಿ, ಪಾರ್ಥೀವ್ ಪಟೇಲ್, ಶಿವಂ ದುಬೆ, ಕೊಲಿನ್ ಡೇ ಗ್ರ್ಯಾಂಡ್‌ಹೊಮ್ಮೆ, ಶಿಮ್ರೊನ್ ಹೆಟ್ಮೆಯರ್, ಪ್ರಯಾಸ್ ಬರ್ಮನ್, ಯಜುವೇಂದ್ರ ಚೆಹಾಲ್, ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್

RR ಸಂಭವನೀಯ ತಂಡ:
ಅಜಿಂಕ್ಯ ರಹಾನೆ(ನಾಯಕ), ಜೋಸ್ ಬಟ್ಲರ್, ಸಂಜು ಸಾಮ್ಸನ್, ರಾಹುಲ್ ತ್ರಿಪಾಠಿ, ಆಶ್ಟನ್ ಟರ್ನರ್, ಬೆನ್ ಸ್ಟೋಕ್ಸ್, ಕೆ.ಗೌತಮ್, ಜೋಫ್ರಾ ಆರ್ಚರ್, ಶ್ರೇಯಸ್ ಗೋಪಾಲ್, ಧವಲ್ ಕುಲಕರ್ಣಿ, ವರುಣ್ ಆರೋನ್