ಚೆನ್ನೈ(ಮೇ.07): 12ನೇ ಐಪಿಎಲ್ ಟೂರ್ನಿಯ ಪ್ಲೇ ಆಫ್ ಪಂದ್ಯ ಆರಂಭಗೊಂಡಿದೆ. ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ಹೋರಾಟ ನಡೆಸುತ್ತಿದೆ. ಟಾಸ್ ಗೆದ್ದಿರುವ ಚೆನ್ನೈ  ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ .ಮುಂಬೈ ತಂಡದಲ್ಲಿ ಮೆಚೆಲ್ ಮೆಕ್ಲೆನಾಘನ್ ಬದಲು ಜಯಂತ್ ಯಾಧವ್ ತಂಡ ಸೇರಿಕೊಂಡಿದ್ದಾರೆ. ಇನ್ನು ಚೆನ್ನೈ ತಂಡದಲ್ಲಿ ಕೇದಾರ್ ಜಾಧವ್ ಬದಲು ಮುರಳಿ ವಿಜಯ್ ಸ್ಥಾನ ಪಡೆದಿದ್ದಾರೆ.

ಇದನ್ನೂ ಓದಿ: ಮಗಳಿಗೆ ಅರ್ಧಶತಕ ಡೆಡಿಕೇಟ್ ಮಾಡಿದ ರೋಹಿತ್ ಶರ್ಮಾ

ಲೀಗ್ ಹಂತದಲ್ಲಿ ಅದ್ಬುತ ಪ್ರದರ್ಶನ ಮೂಲಕ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಅಲಂಕರಿಸಿತು. 14 ಪಂದ್ಯದಲ್ಲಿ 9 ಗೆಲುವು ಹಾಗೂ 5 ಸೋಲಿನ ಮೂಲಕ 18 ಅಂಕ ಸಂಪಾದಿಸಿತು. ಇನ್ನು ಚೆನ್ನೈ ಸೂಪರ್ ಕಿಂಗ್ಸ್ ಕೂಡ 18 ಅಂಕ ಸಂಪಾದಿಸಿತು. ಆದರೆ ರನ್ ರೇಟ್ ಆಧಾರದಲ್ಲಿ ಮುಂಬೈ ಮೊದಲ ಸ್ಥಾನ ಅಲಂಕರಿಸಿದೆ