ಬೆಂಗಳೂರು(ಏ.21): ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಅಬ್ಬರ ನಿರೀಕ್ಷಿಸಿದ್ದ ಅಭಿಮಾನಿಗಳಿಗೆ ಪಾರ್ಥೀವ್ ಪಟೇಲ್ ಮನರಂಜನೆ ನೀಡಿದರು. ಪಾರ್ಥೀವ್ ಪಟೇಲ್ ಹೋರಾಟ, ಎಬಿ ಡಿವಿಲಿಯರ್ಸ್ ಹಾಗೂ ಅಕ್ಷದೀಪ್ ನಾಥ್ ಹಾಗೂ ಮೊಯಿನ್ ಆಲಿ ಅವರ ಉಪಯುಕ್ತ ಕಾಣಿಕೆಯಿಂದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು 161 ರನ್ ಸಿಡಿಸಿದೆ. 

ಟಾಸ್ ಸೋತು ಬ್ಯಾಟಿಂಗ್ ಇಳಿದ RCB ಆರಂಭದಲ್ಲೇ ಕೊಹ್ಲಿ ವಿಕೆಟ್ ಕಳೆದುಕೊಂಡಿದು. ಕೊಹ್ಲಿ ಕೇವಲ 9 ರನ್ ಸಿಡಿಸಿ ಔಟಾದರು. ಎಬಿ ಡಿವಿಲಿಯರ್ಸ್ 25 ರನ್ ಕಾಣಿಕೆ ನೀಡಿದರೆ, ಅಕ್ಷದೀಪ್ ನಾಥ್ 24 ರನ್ ಸಿಡಿಸಿ ಔಟಾದರು. ಒಂದೆಡೆ ವಿಕೆಟ್ ಉರುಳುತ್ತಿದ್ದರೂ ಪಾರ್ಥೀವ್ ಪಟೇಲ್ ಹೋರಾಟ ನೀಡಿದರು.

ಪಾರ್ಥೀವ್ ಪಟೇಲ್ ಹಾಫ್ ಸೆಂಚುರಿ ಸಿಡಿಸಿ ತಂಡಕ್ಕೆ ಆಸರೆಯಾದರು. ಅರ್ಧಶತಕದ ಬಳಿಕ ಪಾರ್ಥೀವ್ ವಿಕೆಟ್ ಕೈಚೆಲ್ಲಿದರು. ಪಾರ್ಥೀವ್ 53 ರನ್ ಸಿಡಿಸಿ ಔಟಾದರು. ಮಾರ್ಕಸ್ ಸ್ಟೊಯ್ನಿಸ್ 14 ರನ್‌ಗೆ ಸುಸ್ತಾದರು. ಪವನ್ ನೇಗಿ ಮತ್ತೆ ನಿರಾಸೆ ಅನುಭವಿಸಿದರು. ಮೊಯಿನ್ ಆಲಿ 26 ರನ್ ಸಿಡಿಸಿದರು. ಈ ಮೂಲಕ RCB 7 ವಿಕೆಟ್ ನಷ್ಟಕ್ಕೆ 161 ರನ್ ಸಿಡಿಸಿತು.