ಮುಂಬೈ(ಏ.15):  12ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ 7ನೇ ಪಂದ್ಯದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅದೃಷ್ಟ ಬದಲಾಗಿದೆ. ಸತತ 6 ಪಂದ್ಯವನ್ನ  ಸೋತು 7ನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ 8 ವಿಕೆಟ್ ಗೆಲುವು ದಾಖಲಿಸೋ ಮೂಲಕ RCB ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡಿದೆ. ಇದೀಗ ಮುಂಬೈ ವಿರುದ್ದದ ಹೋರಾಟಕ್ಕೆ ಸಜ್ಜಾಗಿದೆ.

ಮುಂಬೈನ ವಾಂಖೆಡೆಯಲ್ಲಿ ನಡೆಯಲಿರುವ ಪಂದ್ಯಕ್ಕೆ ಉಭಯ ತಂಡಗಳ ಬಲಿಷ್ಠ ತಂಡ ಕಣಕ್ಕಿಳಿಸಲು ನಿರ್ಧರಿಸಿದೆ. RCB ತಂಡ ಸೇರಿಕೊಂಡಿರುವ ಡೇಲ್ ಸ್ಟೇನ್ ಮುಂಬೈ ವಿರುದ್ಧ ಕಣಕ್ಕಿಳಿಯುವ ಸಾಧ್ಯತೆ ಇದೆ.  ಇಂದಿನ ಪಂದ್ಯಕ್ಕೆ(ಏ.15) ಮುಂಬೈ ಹಾಗೂ ಬೆಂಗಳೂರು ತಂಡದ ಸಂಭವನೀಯ ಆಟಗಾರರ ಪಟ್ಟಿ ಇಲ್ಲಿದೆ.

RCB ಸಂಭವನೀಯ ತಂಡ:
ವಿರಾಟ್ ಕೊಹ್ಲಿ(ನಾಯಕ), ಪಾರ್ಥೀವ್ ಪಟೇಲ್,  ಎಬಿ ಡಿವಿಲಿಯರ್ಸ್,. ಮಾರ್ಕಸ್ ಸ್ಟೊಯ್ನಿಸ್, ಮೊಯಿನ್ ಆಲಿ, ಅಕ್ಷದೀಪ್ ನಾಥ್, ಪವನ್ ನೇಗಿ, ನವದೀಪ್ ಸೈನಿ, ಯಜುವೇಂದ್ರ ಚಹಾಲ್, ಉಮೇಶ್ ಯಾದವ್, ಡೇಲ್ ಸ್ಟೇನ್

ಮುಂಬೈ ಸಂಭವನೀಯ ತಂಡ:
ರೋಹಿತ್ ಶರ್ಮಾ(ನಾಯಕ), ಕ್ವಿಂಟನ್ ಡಿಕಾಕ್, ಇಶಾನ್ ಕಿಶನ್, ಸೂರ್ಯಕುಮಾರ್, ಕೀರನ್ ಪೊಲಾರ್ಡ್, ಹಾರ್ದಿಕ್ ಪಾಂಡ್ಯ, ಕ್ರುನಾಲ್ ಪಾಂಡ್ಯ, ಜಾಸನ್ ಬೆಹನ್‌ಡ್ರೊಫ್, ಜಸ್ಪ್ರೀತ್ ಬುಮ್ರಾ, ಲಸಿತ್ ಮಾಲಿಂಗ