ದೆಹಲಿ(ಏ.18): ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆಯುತ್ತಿರುವ ಲೀಗ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ 5 ವಿಕೆಟ್ ನಷ್ಟಕ್ಕೆ 168 ರನ್ ಸಿಡಿಸಿದೆ. ಈ ಮೂಲಕ ಡೆಲ್ಲಿ ತಂಡಕ್ಕೆ 169 ರನ್ ಟಾರ್ಗೆಟ್ ನೀಡಿದೆ. 

ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಮುಂಬೈ ಇಂಡಿಯನ್ಸ್‌ಗೆ ನಾಯಕ ರೋಹಿತ್ ಶರ್ಮಾ ಹಾಗೂ ಕ್ವಿಂಟನ್ ಡಿಕಾಕ್ ಉತ್ತಮ ಆರಂಭ ನೀಡಿದರು. ರೋಹಿತ್ ಶರ್ಮಾ 30 ರನ್ ಸಿಡಿಸಿ ಔಟಾದರು. ತಂಡದಲ್ಲಿ ಸ್ಥಾನ ಪಡೆದ ಬೆನ್ ಕಟ್ಟಿಂಗ್ 2 ರನ್ ಸಿಡಿಸಿ ಔಟಾದರು. ಕ್ವಿಂಟನ್ ಡಿಕಾಕ್ 35 ರನ್ ಕಾಣಿಕೆ ನೀಡಿದರು.

ಸೂರ್ಯಕುಮಾರ್ ಯಾಧವ್ 26 ರನ್ ಸಿಡಿಸಿ ಔಟಾದರು. ಕ್ರುನಾಲ್ ಪಾಂಡ್ಯ ಹಾಗೂ ಹಾರ್ದಿಕ್ ಪಾಂಡ್ಯ ಜೊತೆಯಾಟದಿಂದ ಮುಂಬೈ ಚೇತರಿಸಿಕೊಂಡಿತು. ಹಾರ್ದಿಕ್ ಪಾಂಡ್ಯ 15 ಎಸೆತದಲ್ಲಿ 2 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 32 ರನ್ ಸಿಡಿಸಿ ಔಟಾದರು. ಇತ್ತ ಕ್ರುನಾಲ್ ಪಾಂಡ್ಯ 26 ಎಸೆತದಲ್ಲಿ ಅಜೇಯ 37 ರನ್ ಸಿಡಿಸಿದರು. ಇದರೊಂದಿಗೆ ಮುಂಬೈ ಇಂಡಿಯನ್ಸ್ 5 ವಿಕೆಟ್ ನಷ್ಟಕ್ಕೆ 168  ರನ್ ಸಿಡಿಸಿತು.