ಮುಂಬೈ(ಮೇ.02): ಪ್ಲೇ ಆಫ್ ಸ್ಥಾನಕ್ಕಾಗಿ ಮುಂಬೈ ಇಂಡಿಯನ್ಸ್ ಹಾಗೂ ಸನ್‌ರೈಸರ್ಸ್ ಕಠಿಣ  ಹೋರಾಟ ನೀಡುತ್ತಿದೆ. SRH ಅದ್ಬುತ ಬೌಲಿಂಗ್ ದಾಳಿಯಿಂದ ಮುಂಬೈ ಇಂಡಿಯನ್ಸ್ ವಿಕೆಟ್ 5 ನಷ್ಟಕ್ಕೆ 162 ರನ್ ಸಿಡಿಸಿದೆ. ಈ ಮೂಲಕ ಹೈದರಾಬಾದ್ ತಂಡಕ್ಕೆ 162 ರನ್ ಸಾಧಾರಣ ಗುರಿ ನೀಡಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಮುಂಬೈ ಇಂಡಿಯನ್ಸ್ ತಂಡಕ್ಕೆ ನಾಯಕ ರೋಹಿತ್ ಶರ್ಮಾ ಹಾಗೂ  ಕ್ವಿಂಟನ್ ಡಿಕಾಕ್ ಉತ್ತಮ ಆರಂಭ ನೀಡಿದರೆ. ರೋಹಿತ್ 24 ರನ್ ಸಿಡಿಸಿ ಔಟಾದರು. ಇತ್ತ ಡಿಕಾಕ್ ನಿಧಾನಗತಿಯಲ್ಲಿ ಬ್ಯಾಟ್ ಬೀಸಿದರು. ಸೂರ್ಯಕುಮಾರ್ ಯಾದವ್ 23 ರನ್ ಸಿಡಿಸಿ ಔಟಾದರು.

ಹೋರಾಟ ನೀಡಿದ ಡಿಕಾಕ್ ಅರ್ಧಶತಕ ಸಿಡಿಸಿ ಮಿಂಚಿದರು. ಇವಿನ್ ಲಿವಿಸ್ 1 ರನ್‌ಗೆ ಸುಸ್ತಾದರೆ, ಹಾರ್ದಿಕ್ ಪಾಂಡ್ಯ 18 ರನ್ ಸಿಡಿಸಿ ನಿರ್ಗಮಿಸಿದರು. ಕೀರನ್ ಪೊಲಾರ್ಡ್ 10 ರನ್ ಗಳಿಸಿ ಔಟಾದರು. ಡಿಕಾಕ್ ಅಜೇಯ 69 ರನ್ ಸಿಡಿಸಿದರು. ಈ ಮೂಲಕ ಮುಂಬೈ 5 ವಿಕೆಟ್ ನಷ್ಟಕ್ಕೆ 162 ರನ್ ಸಿಡಿಸಿತು.