Asianet Suvarna News Asianet Suvarna News

IPL 2019: SRHಗೆ ಸುಲಭ ಟಾರ್ಗೆಟ್ ನೀಡಿದ ಮುಂಬೈ!

2019ರ IPL ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಏರಿಳಿತ ಕಾಣುತ್ತಿದೆ. CSK ವಿರುದ್ದ ಅಬ್ಬರಿಸಿದ್ದ ಮುಂಬೈ ಇದೀಗ ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸಿದೆ. ಹೈದರಾಬಾದ್ ವಿರದ್ದ ಅಲ್ಪಮೊತ್ತ ಸಿಡಿಸಿರುವ ಮುಂಬೈ, ಬೌಲಿಂಗ್‌ನಲ್ಲಿ ಡಿಫೆಂಡ್ ಮಾಡಿಕೊಳ್ಳೋ ವಿಶ್ವಾಸದಲ್ಲಿದೆ. ಇಲ್ಲಿದೆ ವಿವರ.

IPL 2019 Mumbai Indians set 137 run target against SRH  in Hyderabad
Author
Bengaluru, First Published Apr 6, 2019, 9:44 PM IST

ಹೈದರಾಬಾದ್(ಏ.06): ಕಳೆದ ಪಂದ್ಯದಲ್ಲಿ ಬಲಿಷ್ಠ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನೇ ಸೋಲಿಸಿ ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿದ ಮುಂಬೈ ಇಂಡಿಯನ್ಸ್ ಬ್ಯಾಟಿಂಗ್‌ನಲ್ಲಿ ಮುಗ್ಗರಿಸಿದೆ. ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಮುಂಬೈ 7 ವಿಕೆಟ್ ನಷ್ಟಕ್ಕೆ 137 ರನ್  ಸಿಡಿಸಿದೆ. ಈ ಮೂಲಕ ಹೈದರಾಬಾದ್ ತಂಡಕ್ಕೆ ಸುಲಭ ಟಾರ್ಗೆಟ್ ನೀಡಿದೆ.

ಟಾಸ್ ಸೋತು ಬ್ಯಾಟಿಂಗ್ ಇಳಿದ ಮುಂಬೈ 21 ರನ್‌ಗೆ ಮೊದಲ ವಿಕೆಟ್ ಕಳೆದುಕೊಂಡಿತು. ನಾಯಕ ರೋಹಿತ್ ಶರ್ಮಾ 11 ರನ್‌ಗಳಿಗೆ ಔಟಾದರು.  28 ರನ್‌ಗೆ 2ನೇ ವಿಕೆಟ್ ಪತನಗೊಂಡಿತು. ಸೂರ್ಯಕುಮಾರ್ 7 ರನ್ ಸಿಡಿಸಿ ಔಟಾದರು. ಕ್ವಿಂಟನ್ ಡಿಕಾಕ್ 19, ಕ್ರುನಾಲ್ ಪಾಂಡ್ಯ 6, ಇಶಾನ್ ಕಿಶನ್ 17 ಹಾಗೂ ಹಾರ್ದಿಕ್ ಪಾಂಡ್ಯ 14 ರನ್ ಸಿಡಿಸಿ ಔಟಾದರು.

ಮುಂಬೈ ಇಂಡಿಯನ್ಸ್ ತಂಡದ ಯಾವ ಬ್ಯಾಟ್ಸ್‌ಮನ್‌ಗಳು ಹೋರಾಟ ನೀಡಲಿಲ್ಲ. ಪ್ರತಿಯೊಬ್ಬರು ರನ್‌ಗಾಗಿ ಪರದಾಡಿದರು.  ಆದರೆ ಕೀರನ್ ಪೊಲಾರ್ಡ್ ಹೋರಾಟ ನೀಡಿದರು. ಭರ್ಜರಿ 4 ಸಿಕ್ಸರ್ ಸಿಡಿಸೋ ಮೂಲಕ 26 ಎಸೆತದಲ್ಲಿ ಅಜೇಯ 46 ರನ್ ಸಿಡಿಸಿದರು. ಹೀಗಾಗಿ ಮುಂಬೈ ಇಂಡಿಯನ್ಸ್ 7 ವಿಕೆಟ್ ನಷ್ಟಕ್ಕೆ 136 ರನ್ ಸಿಡಿಸಿತು. 

Follow Us:
Download App:
  • android
  • ios