ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಮತ್ತೊಂದು ರೋಚಕ ಪಂದ್ಯಕ್ಕೆ ಸಾಕ್ಷಿಯಾಗಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಇಂದಿನ ಪಂದ್ಯ ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ. ಮುಂಬೈ ಇಂಡಿಯನ್ಸ್ ಸಂಭನೀಯ ತಂಡ ಇಲ್ಲಿದೆ.
ಬೆಂಗಳೂರು(ಮಾ.28): ಐಪಿಎಲ್ ಟೂರ್ನಿಯಲ್ಲಿಂದು ಬಲಿಷ್ಠ ತಂಡಗಳ ಹೋರಾಟ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆತಿಥೇಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ಪಂದ್ಯ ಅಭಿಮಾನಿಗಳಿಗೆ ಭರಪೂರ ಮನರಂಜನೆ ಸಿಗಲಿದೆ. ಬ್ಯಾಟಿಂಗ್ ಸಹಕಾರಿ ಪಿಚ್‌ನಲ್ಲಿ ಉಭಯ ತಂಡಗಳು ರನ್ ಮಳೆ ಹರಿಸಲಿದೆ.
ಇದನ್ನೂ ಓದಿ: IPL 2019: ಮುಂಬೈ ವಿರುದ್ಧದ ಹೋರಾಟಕ್ಕೆ RCB ಸಂಭವನೀಯ ತಂಡ!
RCB ವಿರುದ್ಧ ಗೆಲುವಿಗಾಗಿ ಮುಂಬೈ ರಣತಂತ್ರ ರೂಪಿಸಿದೆ. ಪಿಚ್ ಹಾಗೂ ಎದುರಾಳಿ ಸ್ಟ್ರೆಂಥ್-ವೀಕ್ನೆಸ್ ಅನುಗುಣವಾಗಿ ಬಲಿಷ್ಠ ತಂಡ ಕಣಕ್ಕಿಳಿಸಲು ಮುಂಬೈ ನಿರ್ಧರಿಸಿದೆ. ಈ ಮೂಲಕ RCB ವಿರುದ್ಧ ಗೆಲುವು ಸಾಧಿಸಲು ಮುಂಬೈ ಪ್ಲಾನ್ ಮಾಡಿದೆ.
ಇದನ್ನೂ ಓದಿ: RCB ತಂಡಕ್ಕೆ ಬೌಲಿಂಗ್ ಮಾಡಿದ ಕರ್ನಾಟಕದ ಬುಮ್ರಾ..!
ಮುಂಬೈ ಇಂಡಿಯನ್ಸ್ ಸಂಭವನೀಯ ತಂಡ:
ರೋಹಿತ್ ಶರ್ಮಾ(ನಾಯಕ), ಕ್ವಿಂಟನ್ ಡಿಕಾಕ್, ಸುರ್ಯಕುಮಾರ್ ಯಾದವ್, ಯುವರಾಜ್ ಸಿಂಗ್, ಹಾರ್ದಿಕ್ ಪಾಂಡ್ಯ, ಕೀರನ್ ಪೊಲಾರ್ಡ್, ಕ್ರುನಾಲ್ ಪಾಂಡ್ಯ, ಬೆನ್ ಕಟ್ಟಿಂಗ್. ಮಿಚೆಲ್ ಮೆಕ್ಲೆನಾಘನ್, ಜಸ್ಪ್ರೀತ್ ಬುಮ್ರಾ, ರಸಿಕ್ ಸಲಾಂ
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Mar 28, 2019, 5:47 PM IST