ಮುಂಬೈ(ಮೇ.02):  12ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ 2ನೇ ಸೂಪರ್ ಪಂದ್ಯಕ್ಕೆ ವಾಂಖೆಡೆ ಮೈದಾನ ಸಾಕ್ಷಿಯಾಯಿತು.  ಮುಂಬೈ ಇಂಡಿಯನ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ನಡುವಿನ ಮಹತ್ವದ ಪಂದ್ಯ ಅಭಿಮಾನಿಗಳ ಎದೆಬಡಿತ ಹಿಡಿದಿಟ್ಟುಕೊಂಡ ಪಂದ್ಯವಾಗಿ ಮಾರ್ಪಟ್ಟಿತು. ಸೂಪರ್ ಓವರ್‌ನಲ್ಲಿ  8 ರನ್ ಟಾರ್ಗೆಟ್ ಪಡೆದ ಮುಂಬೈ ನಿರಾಯಾಸವಾಗಿ ಗೆಲುವು ಸಾಧಿಸಿತು.  ಈ ಮೂಲಕ ಮುಂಬೈ ಇಂಡಿಯನ್ಸ್ ಪ್ಲೇ ಆಫ್ ಸ್ಥಾನ  ಖಚಿತಗೊಂಡಿದೆ. ಆದರೆ ಸನ್ ರೈಸರ್ಸ್ ಹೈದರಾಬಾದ್‌ಗೆ  ಅಂತಿಮ ಪಂದ್ಯದಲ್ಲಿ ಗೆದ್ದು ಪ್ಲೇ ಆಫ್ ಸ್ಥಾನ ಖಚಿತಪಡಿಸಿಕೊಳ್ಳೋ ಅವಕಾಶವಿದೆ. 

ಗೆಲುವಿಗೆ 163 ರನ್ ಟಾರ್ಗೆಟ್ ಪಡೆದ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ವೃದ್ಧಿಮಾನ್ ಸಾಹ ಹಾಗೂ ಮಾರ್ಟಿನ್ ಗಪ್ಟಲ್ ಸಾಧಾರಣ ಆರಂಭ ನೀಡಿದರು. ಮೊದಲ ವಿಕೆಟ್‌ಗೆ ಈ ಜೋಡಿ 40 ರನ್ ಜೊತೆಯಾಟ ನೀಡಿದರು. ಗಪ್ಟಿಲ್ 15 ರನ್ ಸಿಡಿಸಿದರೆ, ಸಾಹ 25 ರನ್ ಸಿಡಿಸಿ ಔಟಾದರು.

ಮನೀಶ್ ಪಾಂಡೆ ಏಕಾಂಗಿ ಹೋರಾಟ ನೀಡಿದರು. ಆದರೆ ನಾಯಕ ಕೇನ್ ವಿಲಿಯಮ್ಸನ್ , ವಿಜಯ್ ಶಂಕರ್ ಹಾಗೂ ಅಭಿಷೇಕ್ ಶರ್ಮಾ ಆಸರೆಯಾಗಲಿಲ್ಲ. ಮನೀಶ್ ಪಾಂಡೆ ಅರ್ಧಶತಕ ಸಿಡಿಸಿ ಮಿಂಚಿದರು. ಇತ್ತ ಮೊಹಮ್ಮದ್ ನಬಿ ಉತ್ತಮ ಸಾಥ್ ನೀಡಿದರು. SRH ಗೆಲುವಿಗೆ ಅಂತಿಮ 12 ಎಸೆತದಲ್ಲಿ 29 ರನ್ ಬೇಕಿತ್ತು.

ಮನೀಶ್ ಪಾಂಡೆ ಹಾಗೂ ನಬಿ ಬೌಂಡರಿ ಹಾಗೂ ಸಿಕ್ಸರ್ ಹೊಡೆತಕ್ಕೆ ಮುಂಬೈ ಬೆಚ್ಚಿ ಬಿದ್ದಿತು. ಅಂತಿಮ ಹಂತದಲ್ಲಿ ಹೈದರಾಬಾದ್ 31 ರನ್ ಸಿಡಿಸಿ ಔಟಾದರು.  ಅಂತಿಮ 1 ಎಸೆತದಲ್ಲಿ 7 ರನ್ ಅವಶ್ಯಕತೆ ಇತ್ತು. ಮನೀಶ್ ಪಾಂಡೆ ಭರ್ಜರಿ ಸಿಕ್ಸರ್ ಸಿಡಿಸಿ ಪಂಡ್ಯ ಟೈ ಮಾಡಿದರು.  ಈ ಮೂಲಕ ರಿಲಸ್ಟ್‌ಗಾಗಿ ಸೂಪರ್ ಓವರ್ ಮೊರೆ ಹೋಗಿತ್ತು. ಪಾಂಡ್ಯ ಅಡೇಯ 71 ರನ್ ಸಿಡಿಸಿ ಹೀರೋ ಆಗಿ ಮಿಂಚಿದರು.

ಸೂಪರ್ ಓವರ್‌ನಲ್ಲಿ ಹೈದರಬಾದ್ 8 ರನ್ ಸಿಡಿಸಿತು. 9 ರನ್ ಗುರಿ ಪಡೆದ  ಮುಂಬೈ ಇಂಡಿಯನ್ಸ್ ಹಾರ್ದಿಕ್ ಪಾಂಡ್ಯ ಹಾಗೂ ಕೀರನ್ ಪೊಲಾರ್ಡ್ ಬ್ಯಾಟಿಂಗ್ ಕಳುಹಿಸಿತು. ಪಾಂಡ್ಯ ಮೊದಲ ಎಸೆತವನ್ನೇ ಸಿಕ್ಸರ್ ಗಟ್ಟಿ ಗೆಲುವಿನ ಹಾದಿ ಸುಗಮಗೊಳಿಸಿದರು. ರೋಚಕ  ಪಂದ್ಯದಲ್ಲಿ ಮುಂಬೈ ಗೆಲುವಿನ ನಗೆ ಬೀರಿತು.ಮುಂಬೈ ಇಂಡಿಯನ್ಸ್ 3ನೇ ತಂಡವಾಗಿ ಪ್ಲೇ ಆಫ್ ಪ್ರವೇಶಿಸಿತು.