ಚೆನ್ನೈ(ಮಾ.23): 12ನೇ ಆವೃತ್ತಿ ಐಪಿಎಲ್ ಟೂರ್ನಿಗೆ ಚಾಲನೆ ಸಿಕ್ಕಿದೆ. ಚೆನ್ನೈನಲ್ಲಿನ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೋರಾಟ ನಡೆಸುತ್ತಿದೆ. CSK ಅಭಿಮಾನಿಗಳಿಗೆ ಡಬಲ್ ಧಮಾಕ. ಯಾಕೆಂದರೆ ಮೈದಾನದಲ್ಲಿ ಕ್ರಿಕೆಟ್ ತಲೈವಾ ಎಂ.ಎಸ್.ಧೋನಿ, ಗ್ಯಾಲರಿಯಲ್ಲಿ ತಮಿಳು ತಲೈವಾ, ಸೂಪರ್ ಸ್ಟಾರ್ ರಜನಿಕಾಂತ್ ಅಭಿಮಾನಿಗಳ ಸಂಭ್ರವನ್ನು ಇಮ್ಮಡಿಗೊಳಿಸಿದರು.

ಇದನ್ನೂ ಓದಿ: IPL 2019: ಪುಲ್ವಾಮಾ ಹುತಾತ್ಮ ಕುಟುಂಬಕ್ಕೆ CSK 2 ಕೋಟಿ ನೆರವು!

CSK ಹಾಗೂ RCB ನಡುವಿನ ಪಂದ್ಯ ವೀಕ್ಷಿಸಲು ನಟ ರಜನಿಕಾಂತ್ ಆಗಮಿಸಿದ್ದರು. ಇದು ಅಭಿಮಾನಿಗಳಲ್ಲಿ ಹೊಸ ಉತ್ಸಾಹ ತಂದಿತು. ಒಂದೆಡೆ ಧೋನಿ ತಲೈವಾ ಇದ್ದರೆ, ಮತ್ತೊಂದೆಡೆ ತಮಿಳು ತಲೈವಾ ರಜನಿಕಾಂತ್ ನೋಡಿದ ಅಭಿಮಾನಿಗಳು ಸಂತಸದಲ್ಲಿ ತೇಲಾಡಿದರು.

 

 

ಇದನ್ನೂ ಓದಿ: IPL ಜೋಶ್: ಆರೆಂಜ್ ಕ್ಯಾಪ್ ಗೆದ್ದ ಸ್ಫೋಟಕ ಬ್ಯಾಟ್ಸ್’ಮನ್’ಗಳಿವರು

ಕ್ರಿಕೆಟ್ ಪಂದ್ಯವನ್ನು ಇಷ್ಟಪಡುವ ರಜನಿಕಾಂತ್ ಟೀಂ ಇಂಡಿಯಾ, ಐಪಿಲ್ ಸೇರಿದಂತೆ ಹಲವು ಕ್ರಿಕೆಟ್ ಪಂದ್ಯಗಳ ವೇಳೆ ಕ್ರೀಡಾಂಗಣದಲ್ಲಿ ಕಾಣಸಿಕೊಂಡಿದ್ದಾರೆ. ಇದೀಗ ಉದ್ಘಾಟನಾ ಪಂದ್ಯದಲ್ಲಿ ಕಾಣಿಸಿಕೊಳ್ಳೋ ಮೂಲಕು ಚೆನ್ನೈ ಅಭಿಮಾನಿಗಳ ಸಂಭ್ರಮವನ್ನು ಇಮ್ಮಡಿಗೊಳಿಸಿದ್ದಾರೆ.