ಐಪಿಎಲ್ ಟೂರ್ನಿಯಲ್ಲಿಂದು ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗುತ್ತಿದೆ. ಇಂದಿನ ಪಂದ್ಯಕ್ಕೆ ಬಲಿಷ್ಠ ತಂಡ ಕಣಕ್ಕಿಳಿಸಲು ಉಭಯ ತಂಡ ನಿರ್ಧರಿಸಿದೆ. ಇಲ್ಲಿದೆ ಪಂಜಾಬ್ ಹಾಗೂ ಮುಂಬೈ ಸಂಭವನೀಯ ತಂಡ.  

ಪಂಜಾಬ್(ಮಾ.30):  ಮೊದಲೆರಡು ಪಂದ್ಯಗಳಲ್ಲಿ ವಿವಾದಗಳಿಗೆ ದಾರಿ ಮಾಡಿಕೊಟ್ಟಿದ್ದ ಕಿಂಗ್ಸ್‌ ಇಲೆವೆನ್‌ ಪಂಜಾಬ್‌, ಶನಿವಾರ ತವರಿನಲ್ಲಿ ಈ ಆವೃತ್ತಿಯ ಮೊದಲ ಪಂದ್ಯವನ್ನಾಡಲಿದೆ. ಬಲಿಷ್ಠ ಮುಂಬೈ ಇಂಡಿಯನ್ಸ್‌ ಸವಾಲು ಸ್ವೀಕರಿಸಲಿರುವ ಪಂಜಾಬ್‌ ಜಯದ ಮೇಲೆ ಕಣ್ಣಿಟ್ಟಿದೆ. ಉಭಯ ತಂಡಗಳು ತಲಾ ಒಂದು ಗೆಲುವು, ಸೋಲು ಕಂಡಿವೆ. ಕ್ರಿಸ್‌ ಗೇಲ್‌ ವರ್ಸಸ್‌ ಜಸ್‌ಪ್ರೀತ್‌ ಬೂಮ್ರಾ ಪೈಪೋಟಿ ಭಾರೀ ನಿರೀಕ್ಷೆ ಹುಟ್ಟಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ಓದಿ: RCB ಬೂಮ್ರಾಗೆ ಹೆಚ್ಚಿದ ಬೇಡಿಕೆ- ಇತರ IPL ತಂಡಗಳಿಂದ ಆಹ್ವಾನ

ಪಂಜಾಬ್ ಸಂಭವನೀಯ ತಂಡ:
ಕೆ.ಎಲ್.ರಾಹುಲ್, ಕ್ರಿಸ್ ಗೇಲ್, ಮಯಾಂಕ್ ಅಗರ್ವಾಲ್, ಸರ್ಫಾರಾಜ್ ಖಾನ್, ಡೇವಿಡ್ ಮಿಲ್ಲರ್, ಮನ್ದೀಪ್ ಸಿಂಗ್, ಹರ್ಡಸ್ ವಿಲ್ಜೊನ್, ಆರ್ ಅಶ್ವಿನ್, ವರುಣ್ ಚಕ್ರವವರ್ತಿ, ಮೊಹಮ್ಮದ್ ಶಮಿ, ಆಂಡ್ಯ್ರೂ ಟೈ

ಇದನ್ನೂ ಓದಿ: ಮಂಕಾಯ್ತು ಸಾಮ್ಸನ್ ಶತಕ - ರೋಚಕ ಪಂದ್ಯದಲ್ಲಿ SRHಗೆ ಗೆಲುವು!

ಮುಂಬೈ ಸಂಭವನೀಯ ತಂಡ:
ರೋಹಿತ್ ಶರ್ಮಾ(ನಾಯಕ), ಕ್ವಿಂಟನ್ ಡಿ ಕಾಕ್, ಸೂರ್ಯಕುಮಾರ್ ಯಾದವ್, ಯುವರಾಜ್ ಸಿಂಗ್, ಕೀರನ್ ಪೊಲಾರ್ಡ್, ಹಾರ್ದಿಕ್ ಪಾಂಡ್ಯ, ಕ್ರುನಾಲ್ ಪಾಂಡ್ಯ, ಮಿಚೆಲ್ ಮೆಕ್ಲೆನಾಘನ್, ಲಸಿತ್ ಮಲಿಂಗ, ಮಯಾಂಕ್ ಮಾರ್ಕಂಡೆ, ಜಸ್ಪ್ರೀತ್ ಬುಮ್ರಾ