Asianet Suvarna News Asianet Suvarna News

ಕ್ರಿಸ್ ಗೇಲ್ ಸವಾಲಿಗೆ ಸಿದ್ದವೆಂದ ಸನ್ನಿ ಲಿಯೋನ್

. ಸಾಕಷ್ಟು ಮಂದಿ ಗೇಲ್ ಸವಾಲನ್ನು ಸ್ವೀಕರಿಸಿದ್ದರು. ಇದೀಗ ಅಖಾಡಕ್ಕೆ ಸ್ವತಃ ಸನ್ನಿಯೇ ಇಳಿದಿದ್ದು, ‘ಗೇಲ್ ನಿಮ್ಮ ಸವಾಲನ್ನು ನಾನು ಸ್ವೀಕರಿಸುತ್ತೇನೆ. ಆದರೆ, ನಿಮಗಿಂತ ಮೊದಲೇ ನಾನು ಹಾಡಿಗೆ ನೃತ್ಯ ಮಾಡಿದ್ದೇನೆ ಎಂಬುದು ತಿಳಿದಿರಲಿ

Sunny Leone Accepts Chris Gayles Dance Challenge

ಮುಂಬೈ(ಜು.19): ವೆಸ್ಟ್‌ಇಂಡೀಸ್ ಕ್ರಿಕೆಟಿಗ ಕ್ರಿಸ್ ಗೇಲ್ ಟ್ವಿಟರ್‌ನಲ್ಲಿ ಎಸೆದಿದ್ದ ಸವಾಲನ್ನು ನಟಿ ಸನ್ನಿ ಲಿಯೋನ್ ಸ್ವೀಕರಿಸಿದ್ದಾರೆ. ಇತ್ತೀಚೆಗೆ ಪಾರ್ಟಿಯೊಂದರಲ್ಲಿ ಸನ್ನಿ ಅಭಿನಯದ ‘ರಯೀಸ್’ ಚಿತ್ರದ ‘ಲೈಲಾ’ ಹಾಡಿಗೆ ಹೆಜ್ಜೆ ಹಾಕಿದ್ದ ಗೇಲ್, ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದರು. ಇದೇ ವೇಳೆ ಗೇಲ್, ಈ ಹಾಡಿಗೆ ನನಗಿಂತ ಚೆನ್ನಾಗಿ ನೃತ್ಯ ಮಾಡಿ ಅಭಿಮಾನಿಗಳ ಮೆಚ್ಚುಗೆ ಗಳಿಸಿದರೆ 5 ಸಾವಿರ ಅಮೆರಿಕನ್ ಡಾಲರ್ ನೀಡುವುದಾಗಿ ಸವಾಲು ಹಾಕಿದ್ದರು.

ಸಾಕಷ್ಟು ಮಂದಿ ಗೇಲ್ ಸವಾಲನ್ನು ಸ್ವೀಕರಿಸಿದ್ದರು. ಇದೀಗ ಅಖಾಡಕ್ಕೆ ಸ್ವತಃ ಸನ್ನಿಯೇ ಇಳಿದಿದ್ದು, ‘ಗೇಲ್ ನಿಮ್ಮ ಸವಾಲನ್ನು ನಾನು ಸ್ವೀಕರಿಸುತ್ತೇನೆ. ಆದರೆ, ನಿಮಗಿಂತ ಮೊದಲೇ ನಾನು ಆ ಹಾಡಿಗೆ ನೃತ್ಯ ಮಾಡಿದ್ದೇನೆ ಎಂಬುದು ತಿಳಿದಿರಲಿ’ ಎನ್ನುವ ಮೂಲಕ ಗೇಲ್‌ರ ಕಾಲೆಳದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಗೇಲ್, ‘ಹಾ... ನಿಮ್ಮ ನೃತ್ಯವನ್ನು ನೋಡಿದ್ದೇನೆ ಸುಂದರವಾಗಿ ಹೆಜ್ಜೆ ಹಾಕಿದ್ದೀರಿ’ ಎಂದು ಟ್ವೀಟ್ ಮಾಡಿದ್ದಾರೆ.

Follow Us:
Download App:
  • android
  • ios