ಹನ್ನೊಂದನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ಅಬ್ಬರಿಸಿದ ಕ್ರಿಸ್ ಗೇಲ್, ಐಪಿಎಲ್ ಬಳಿಕ ಡ್ಯಾನ್ಸ್ ಮೂಲಕ ಅಭಿಮಾನಿಗಳಿಗೆ ಮನರಂಜನೆ ನೀಡಿದ್ದಾರೆ.

ಮುಂಬೈ(ಮೇ.29): ಐಪಿಎಲ್ ಹನ್ನೊಂದನೇ ಆವೃತ್ತಿಯಲ್ಲಿ ವೆಸ್ಟ್ಇಂಡೀಸ್ ದೈತ್ಯ ಕ್ರಿಸ್ ಗೇಲ್ ಅಭಿಮಾನಿಗಳನ್ನ ರಂಜಿಸುವಲ್ಲಿ ಹಿಂದೆ ಬಿದ್ದಿಲ್ಲ. ಈ ಬಾರಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಅಬ್ಬರಿಸಿದ ಕ್ರಿಸ್ ಗೇಲ್, ಐಪಿಎಲ್ ಮುಗಿದ ಬೆನ್ನಲ್ಲೇ, ಡ್ಯಾನ್ಸ್ ಮೂಲಕ ಗಮನಸೆಳೆದಿದ್ದಾರೆ. ಕ್ರಿಕೆಟಿಗರ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕ್ರಿಸ್ ಗೇಲ್, ಸನ್ ರೈಸರ್ಸ್ ಹೈದರಾಬಾದ್ ತಂಡದ ಶಿಖರ್ ಧವನ್ ಹಾಗೂ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಜೊತೆ ಸ್ಟೇಜ್ ಮೇಲೆ ಹೆಜ್ಜೆ ಹಾಕಿದರು. ವಿಶೇಷ ಅಂದರೆ, ಕ್ರಿಸ್ ಗೇಲ್ ಪಂಜಾಬಿ ಟರ್ಬನ್ ಧರಿಸಿ ಡ್ಯಾನ್ಸ್ ಮಾಡಿದರು. ಇನ್ನು ಶಿಖರ್ ಧವನ್‌ಗೆ ಗೇಲ್ ಡ್ಯಾನ್ಸ್ ಹೇಳಿಕೊಟ್ಟರು. ಕ್ರೀಡಾಂಗಣದಲ್ಲಿ ಶಿಖರ್ ಧವನ್ ಸಂಭ್ರಮಾಚರಣೆಯ ಶೈಲಿಯನ್ನ ಅನುಕರಿಸಿದ ಕ್ರಿಸ್ ಗೇಲ್, ನೆರದಿದ್ದವರಿಗೆ ಅದ್ಬುತ ಮನರಂಜನೆ ನೀಡಿದರು.

Scroll to load tweet…


ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಕ್ರಿಸ್ ಗೇಲ್‌ರನ್ನ ಖರೀಧಿಸಲು ಆರ್‌ಸಿಬಿ ಹಿಂದೇಟು ಹಾಕಿತ್ತು. ಅಂತಿಮ ಹಂತದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಮೂಲ ಬೆಲೆ 2 ಕೋಟಿ ರೂಪಾಯಿ ನೀಡಿ ಖರೀಧಿಸಿತ್ತು. ಸಿಕ್ಕ ಅವಕಾಶದಲ್ಲಿ ಕ್ರಿಸ್ ಗೇಲ್ ಅದ್ಬುತ ಪ್ರದರ್ಶನ ನೀಡಿದರು. 11 ಪಂದ್ಯಗಳಲ್ಲಿ 368 ರನ್ ಸಿಡಿಸಿದ ಗೇಲ್, ಪಂಜಾಬ್ ಪರ ಗರಿಷ್ಠ ರನ್ ಸಿಡಿಸಿದ 2ನೇ ಬ್ಯಾಟ್ಸ್‌ಮನ್ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಗೇಲ್ ಸ್ಫೋಟಕ ಬ್ಯಾಟಿಂಗ್‌ನಲ್ಲಿ 1 ಶತಕ ಹಾಗು 3 ಅರ್ಧಶತಕಗಳು ದಾಖಲಾಗಿವೆ. ಆದರೆ ಕಿಂಗ್ಸ್ ಇಲೆವೆನ್ ಪಂಜಾಬ್ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಯಿತು. ಚೆನ್ನೈ ಸೂಪರ್ ಕಿಂಗ್ಸ್ 3ನೇ ಬಾರಿಗೆ ಐಪಿಎಲ್ ಟ್ರೋಫಿ ಗೆಲ್ಲೋ ಮೂಲಕ ಹನ್ನೊಂದನೇ ಆವೃತ್ತಿಗೆ ತೆರೆ ಬಿದ್ದಿದೆ. ಆದರೆ ಐಪಿಎಲ್ ಸಂಭ್ರಮಾಚರಣೆ ಮಾತ್ರ ಇನ್ನು ಮುಗಿದಿಲ್ಲ.