ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣಗಲ್ಲಿ ರನ್ ಮಳೆ ಸುರಿಯಲಿದೆ. ಒಂದೆಡೆ RCB ತಂಡದ ಕೊಹ್ಲಿ, ಎಬಿಡಿ. ಎದುರಾಳಿಯಾಗಿ RCB ಮಾಜಿ ಆಟಗಾರರು, ಪಂಜಾಬ್ ತಂಡದ ಕ್ರಿಸ್ ಗೇಲ್, ಕೆಎಲ್ ರಾಹುಲ್. ತೀವ್ರ ಕುತೂಹಲ ಕೆರಳಿಸಿರುವ ಪಂದ್ಯದಲ್ಲಿ ಟಾಸ್ ಗೆದ್ದಿರುವ KXIP ಫೀಲ್ಡಿಂಗ್ ಆಯ್ಕೆ ಮಾಡಿದೆ. ಉಭಯ ತಂಡದ ಬದಲಾವಣೆ ಏನು? ಇಲ್ಲಿದೆ.
ಬೆಂಗಳೂರು(ಏ.24): ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ದ ಟಾಸ್ ಗೆದ್ದಿರುವು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಪಂಜಾಬ್ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದೆ. ಸ್ಯಾಮ್ ಕುರ್ರನ್ ಬದಲು ನಿಕೋಲಸ್ ಪೂರನ್ ತಂಡ ಸೇರಿಕೊಂಡಿದ್ದರೆ, ಹರ್ಪ್ರೀತ್ ಬ್ರಾರ್ ಬದಲು ಅಂಕಿತ್ ರಜಪೂತ್ ತಂಡ ಸೇರಿಕೊಂಡಿದ್ದಾರೆ.
ಸತತ 2 ಗೆಲುವು ಸಾಧಿಸಿರುವ RCB ಇದೀಗ ಹ್ಯಾಟ್ರಿಕ್ ಗೆಲುವಿನ ವಿಶ್ವಾಸದಲ್ಲಿದೆ. ವೇಗಿ ಡೇಲ್ ಸ್ಟೇನ್ ಆಗಮನದ ಬಳಿಕ ಬೆಂಗಳೂರು ತಂಡದ ಲಕ್ ಬದಲಾಗಿದೆ. ಇದೀಗ ತವರಿನಲ್ಲಿ ಕಣಕ್ಕಿಳಿಯುತ್ತಿರುವ RCB ಅಭಿಮಾನಿಗಳಿಗೆ ಭರ್ಜರಿ ಗೆಲುವಿನ ಗಿಫ್ಟ್ ನೀಡಲು ರೆಡಿಯಾಗಿದೆ.
ರಾಯಲ್ ಚಾಲೆಂಜರ್ಸ್ ಆಡಿದ 10 ಪಂದ್ಯದಲ್ಲಿ 3 ಗೆಲುವು ಸಾಧಿಸಿದೆ. ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಇತ್ತ ಪಂಜಾಬ್ 10ರಲ್ಲಿ 5 ಪಂದ್ಯ ಗೆದ್ದು, 5ನೇ ಸ್ಥಾನದಲ್ಲಿದೆ. ಕಳೆದ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಸೋಲು ಕಂಡಿರುವ ಪಂಜಾಬ್ ಇದೀಗ ಕಮ್‌ಬ್ಯಾಕ್ ಮಾಡೋ ವಿಶ್ವಾಸದಲ್ಲಿದೆ.
