ಮೊಹಾಲಿ(ಏ.16): ತವರಿನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಆರಂಭದಲ್ಲಿ ನಿಧಾಗತಿಯಲ್ಲಿ ಬ್ಯಾಟ್ ಬಿಸಿದ ಕಿಂಗ್ಸ್ ಇಲೆವೆನ್ ಪಂಜಾಬ್ ಬಳಿಕ ಅಬ್ಬರಿಸಿದೆ. ರಾಜಸ್ಥಾನ ರಾಯಲ್ಸ್ ವಿರುದ್ಧ ಪಂಜಾಬ್ ವಿಕೆಟ್ 6 ನಷ್ಟಕ್ಕೆ 183 ರನ್ ಸಿಡಿಸಿದೆ. ಈ ಮೂಲಕ ಅಜಿಂಕ್ಯ ರಹಾನೆ ಪಡೆಗೆ ರನ್ ಟಾರ್ಗೆಟ್ ನೀಡಿದೆ. 

ಟಾಸ್ ಸೋತು ಬ್ಯಾಟಿಂಗ್ ಇಳಿದ ಕಿಂಗ್ಸ್ ಇಲೆವೆನ್ ಪಂಜಾಬ್ ನಿಧಾನಗತಿಯಲ್ಲಿ ಬ್ಯಾಟಿಂಗ್ ಆರಂಭಿಸಿತು. ಕ್ರಿಸ್ ಗೇಲ್ ಹಾಗೂ ಕೆ.ಎಲ್.ರಾಹುಲ್ ಮೊದಲ ವಿಕೆಟ್‌ಗೆ 38 ರನ್ ಜೊತೆಯಾಟ ನೀಡಿದರು. ಗೇಲ್ 22 ಎಸೆತದಲ್ಲಿ 30 ರನ್ ಸಿಡಿಸಿ ಔಟಾದರು. ಮಯಾಂಕ್ ಅಗರ್ವಾಲ್ 26 ರನ್ ಕಾಣಿಕೆ ನೀಡಿದರು. 

ರಾಹುಲ್ ಹಾಗೂ ಡೇವಿಡ್ ಮಿಲ್ಲರ್ ತಂಡಕ್ಕೆ ಚೇತರಿಕೆ ನೀಡಿದರು. ಆದರೆ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡುವಲ್ಲಿ ವಿಫಲವಾದರು. ರಾಹುಲ್ ಅರ್ಧಶತಕ ಸಿಡಿಸಿದರು. 47 ಎಸೆತದಲ್ಲಿ 52 ರನ್ ಸಿಡಿಸಿ ರಾಹುಲ್ ಔಟಾದರು. ನಿಕೋಲಸ್ ಪೂರನ್,  ಮನ್ದೀಪ್ ಸಿಂಗ್ ಬಹುಬೇಗನೆ ಔಟಾದರು. ಡೇವಿಡ್ ಮಿಲ್ಲರ್ 40 ರನ್ ಕಾಣಿಕೆ ನೀಡಿದರು. ಅಂತಿಮ ಹಂತದಲ್ಲಿ ನಾಯಕ ಆರ್ ಅಶ್ವಿನ್ 2 ಭರ್ಜರಿ ಸಿಕ್ಸರ್ ಮೂಲಕ ಅಜೇಯ 17 ರನ್ ಸಿಡಿಸಿದರು. ಕಿಂಗ್ಸ್ ಇಲೆವೆನ್ ಪಂಜಾಬ್ 6 ವಿಕೆಟ್ ನಷ್ಟಕ್ಕೆ 182 ರನ್ ಸಿಡಿಸಿತು. ರಾಜಸ್ಥಾನದ ಜೋಫ್ರಾ ಅರ್ಚರ್ 3 ವಿಕೆಟ್ ಕಬಳಿಸಿ ಮಿಂಚಿದರು.