ಹೈದರಾಬಾದ್(ಏ.21): ಸನ್ ರೈಸರ್ಸ್ ಹೈದರಾಬಾದ್ ವಿರುದ್ದದ ಲೀಗ್ ಪಂದ್ಯದಲ್ಲಿ ಕ್ರಿಸ್ ಲಿನ್ ಹಾಗೂ ಸುನಿಲ್ ನರೈನ್ ಉತ್ತಮ ಆರಂಭದ ನಡುವೆಯೂ ಬೃಹತ್ ಮೊತ್ತ ಪೇರಿಸಲು ಕೋಲ್ಕತಾ ನೈಟ್ ರೈಡರ್ಸ್ ವಿಫಲವಾಗಿದೆ. KKR 8 ವಿಕೆಟ್ ನಷ್ಟಕ್ಕೆ 159 ರನ್ ಸಿಡಿಸಿದೆ. ಇದೀಗ SRH ಗೆಲುವಿಗೆ 160 ರನ್ ಸಿಡಿಸಬೇಕಿದೆ.

ಟಾಸ್ ಸೋತು ಬ್ಯಾಟಿಂಗ್ ಇಳಿದ KKR ಆರಂಭ ಉತ್ತಮವಾಗಿತ್ತು. ಕ್ರಿಸ್ ಲಿನ್ ಹಾಗೂ ನರೈನ್ 42 ರನ್ ಜೊತೆಯಾಟ ನೀಡಿದರು. ನರೈನ್ ಕೇವಲ 8 ಎಸೆತಗದಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 25 ರನ್ ಸಿಡಿಸಿ ಔಟಾದರು. ಕ್ರಿಲ್ ಲಿನ್ ನಿಧಾನಗತಿಯಲ್ಲಿ ಬ್ಯಾಟ್ ಬೀಸೋ ಮೂಲಕ ತಂಡಕ್ಕೆ ಆಸರೆಯಾದರು.

ಶುಭ್‌ಮಾನ್ ಗಿಲ್, ನಿತೀಶ್ ರಾಣ ಹಾಗೂ ನಾಯಕ ದಿನೇಶ್ ಕಾರ್ತಿಕ್ ಅಬ್ಬರಿಸಲಿಲ್ಲ. ರಿಂಕು ಸಿಂಗ್ 30 ರನ್ ಸಿಡಿಸಿ ಔಟಾದರು. ಕ್ರಿಲ್ ಲಿನ್ 51 ರನ್ ಸಿಡಿಸಿ ನಿರ್ಗಮಿಸಿದರು. ಆ್ಯಂಡ್ರೆ ರಸೆಲ್ ಅಬ್ಬರ ಕೇವಲ 15 ರನ್‌ಗೆ ಅಂತ್ಯವಾಯಿತು. ಹೀಗಾಗಿ ಕೆಕೆಆರ್ 8 ವಿಕೆಟ್ ನಷ್ಟಕ್ಕೆ 159 ರನ್ ಸಿಡಿಸಿತು.